ಭೀಮ. ದುನಿಯಾ ವಿಜಯ್ ನಿರ್ದೇಶನದ 2ನೇ ಸಿನಿಮಾ. ಬೀಮ ಸಿನಿಮಾದ ಹಾಡೊಂದು ಗೌರಿ-ಗಣೇಶ ಹಬ್ಬದ ಕಾಣಿಕೆಯಾಗಿ ರಿಲೀಸ್ ಆಗಿದೆ. ಬ್ಯಾಡ್ ಬಾಯ್ಸ್ ಆನ್ ದ ಸ್ಟ್ರೀಟ್.. ಅನ್ನೋ ಹಾಡು.. ಪಕ್ಕಾ ಲೋಕಲ್ ಸಾಂಗ್ ಮಾಡಿದ್ದಾರೆ ದುನಿಯಾ ವಿಜಯ್. ರಾಹುಲ್ ಡಿಟೋ ಮತ್ತು ಎಂಸಿ ಬಿಜ್ಜು ಹಾಡಿರುವ ಹಾಡಿಗೆ ಸಾಹಿತ್ಯ ನೀಡಿರುವುದು ನಾಗಾರ್ಜುನ ಶರ್ಮ, ರಾಹುಲ್ ಡಿಟೋ ಮತ್ತು ಎಂಸಿ ಬಿಜ್ಜು. ಹೌದು, ಹಾಡುಗಾರರೇ ಸಾಹಿತ್ಯಕ್ಕೂ ಕಾಣಿಕೆ ಹಾಕಿದ್ದಾರೆ. ಕ್ಯಾಚಿ ಎನಿಸುವಂತಹ ಅನೇಕ ಪದಗಳನ್ನು ಇಲ್ಲಿ ಬಳಸಲಾಗಿದೆ. ಕೆಲ ಬೈಗಳುಗಳನ್ನು ಕೂಡ ಈ ಹಾಡಿನಲ್ಲಿ ಕೇಳಬಹುದು. ಚರಣ್ ರಾಜ್ ಮ್ಯೂಸಿಕ್ ಸಾಹಿತ್ಯಕ್ಕೆ ತಕ್ಕಂತೆ ಫಟಾಪಟಾ ಓಡುತ್ತದೆ. ಬೆಂಗಳೂರು ಗಲ್ಲಿಗಳಲ್ಲಿಯೇ ಓಡಾಡಿರುವ ವಿಜಯ್, ಈ ಚಿತ್ರದಲ್ಲಿ ಹೇಳ್ತಿರೋ ಕಥೆಯಾದರೂ ಏನು..?
ಪೋಷಕರು ಮತ್ತು ಮಕ್ಕಳು ಶಾಕ್ ಆಗುವಂತಹ ಒಂದು ವಿಷಯವನ್ನು ಇಟ್ಟುಕೊಂಡು ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಿದ್ದಾರಂತೆ ವಿಜಯ್.
ನನ್ನ ಬಳಿ ಕೆಲವು ವಿಡಿಯೋ ಮತ್ತು ಫೋಟೋಗಳು ಇವೆ. ಸಿನಿಮಾ ರಿಲೀಸ್ಗೂ ಮುನ್ನ ಇದನ್ನು ನಿಮಗೆ ತೋರಿಸುತ್ತೇನೆ. ಇಂದಿನ ಯುವ ಜನತೆ ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂಬುದನ್ನು ನೋಡಿದಾಗ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಪ್ರೀತಿ-ಪ್ರೇಮ, ದುಶ್ಚಟ ಮುಂತಾದ ವಿಚಾರಗಳು ಹೆಣ್ಮಕ್ಕಳು ಮತ್ತು ಗಂಡು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದನ್ನು ಬಹಳ ನೇರವಾಗಿ ತೋರಿಸುತ್ತೇನೆ. ಅನೇಕ ಕಡೆಗಳಲ್ಲಿ ಓಡಾಡಿ, ತುಂಬ ಅಧ್ಯಯನ ಮಾಡಿದ್ದೇನೆ. ಪೋಷಕರಿಗೆ ಈ ಸಿನಿಮಾದಲ್ಲಿ ಎಚ್ಚರಿಕೆ ಗಂಟೆ ಇದೆ’ ಎಂದಿದ್ದಾರೆ ದುನಿಯಾ ವಿಜಯ್.
ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಣದ ಭೀಮ ಚಿತ್ರಕ್ಕೆ ವಿಜಯ್ ಅವರೇ ಹೀರೋ. ಸಿನಿಮಾದಲ್ಲಿ ದುನಿಯಾ ವಿಜಯ್ ವಿಭಿನ್ನ ಪಾತ್ರಗಳನ್ನ ಡಿಸೈನ್ ಮಾಡಿದ್ದಾರೆ. ದುನಿಯಾ ವಿಜಯ್ ಜೊತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ,ಅ ಶ್ವಿನಿ ಮತ್ತು ಪ್ರಿಯಾ ಸೇರಿದಂತೆ ದೊಡ್ಡ ತಾರಬಳಗ ಇದೆ.