ರಕ್ಷಿತ್ ಶೆಟ್ಟಿ ಸಿನಿಮಾ ಪ್ರೇಮಿಗಳ ಹೃದಯ ಗೆದ್ದಿದೆ. ಭಗ್ನಪ್ರೇಮಿಗಳಿಗೂ ಇಷ್ಟವಾಗಿದೆ. ಮುಗ್ಧ ಪ್ರೇಮಿಗಳಿಗೂ ಮೆಚ್ಚುಗೆಯಾಗಿದೆ. ಅದೇ ಕಾರಣಕ್ಕೆ ಸಿನಿಮಾ ಈಗಲೂ ಬಾಕ್ಸಾಫೀಸಿನಲ್ಲಿ ಚೆನ್ನಾಗಿ ರನ್ ಆಗುತ್ತಿದೆ. ತೆಲುಗಿಗೂ ಹೋಗುತ್ತಿದೆ. ಇದೀಗ ಈ ಚಿತ್ರಕ್ಕೆ ಸಮಂತಾ ಅವರ ಮೆಚ್ಚುಗೆಯೂ ಸಿಕ್ಕಿದೆ.
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನೋಡಿದ ಮೇಲೆ ಇದು ಮಾಸ್ಟರ್ಪೀಸ್.. ಇದು ಕಡ್ಡಾಯವಾಗಿ ಎಲ್ಲರೂ ನೋಡಬೇಕಿರುವ ಸಿನಿಮಾ.. ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಹೇಮಂತ್ ರಾವ್ ನಿಮ್ಮ ಈ ಸುಂದರವಾದ ತಂಡಕ್ಕೆ ದೊಡ್ಡ ಅಭಿನಂದನೆಗಳು..' ಎಂದು ಸಮಂತಾ ಬರೆದುಕೊಂಡಿದ್ದಾರೆ.
ನಟಿ ರುಕ್ಮಿಣಿ ವಸಂತ್ಗೆ ವಿಶೇಷ ಮೆಚ್ಚುಗೆಯನ್ನು ತಿಳಿಸಿದ್ದಾರೆ ಸಮಂತಾ. 'ಹೇ ಸುಂದರಿ ರುಕ್ಮಿಣಿ ವಸಂತ್, ಎಂಥ ಅದ್ಭುತ ನಟನೆ.. ಬ್ರಿಲಿಯಂಟ್.. ಎಂದು ಮೆಚ್ಚಿಕೊಂಡಿದ್ದಾರೆ ಸಮಂತಾ.
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ತೆಲುಗಿಗೆ ಡಬ್ ಮಾಡಲಾಗಿದ್ದು, ಸೆ.22ರಂದು ತೆಲುಗು ವರ್ಷನ್ ತೆರೆಕಾಣಲಿದೆ. ಕನ್ನಡದಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಎಂಬ ಹೆಸರಿನಲ್ಲಿ ತೆರೆಕಂಡಿದ್ದ ಈ ಚಿತ್ರವು ತೆಲುಗಿನಲ್ಲಿ 'ಸಪ್ತ ಸಾಗರಾಲು ದಾಟಿ' ಹೆಸರಿನಲ್ಲಿ ರಿಲೀಸ್ ಆಗುತ್ತಿದೆ.