ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಗೆಲುವಿನ ಯಾತ್ರೆ, ಈಗ ಕನ್ನಡದ ಗಟಿ ದಾಟಿ ಹೋಗುತ್ತಿದೆ. ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತೆಲುಗಿಗೆ ಡಬ್ ಆಗಿದ್ದು ಸೆಪ್ಟೆಂಬರ್ 22ರಂದು ಆಂಧ್ರ ಮತ್ತು ತೆಲಂಗಾಣದ ಕೆಲವು ಚಿತ್ರಮಂದಿರಗಳಲ್ಲಿ ಬಿಡಗುಡೆ ಆಗಲಿದೆ. ತೆಲುಗು ಸಿನಿಮಾಕ್ಕೆ ‘ಸಪ್ತ ಸಾಗರಾಲು ದಾಟಿ’ ಎಂದು ಹೆಸರಿಡಲಾಗಿದೆ. ಸೆಪ್ಟೆಂಬರ್ 22 ರಂದು ತೆಲುಗಿನಲ್ಲಿ ‘ಸಪ್ತ ಸಾಗರಾಲು ದಾಟಿ’ ಬಿಡುಗಡೆಯಾಗುತ್ತಿದೆ.
ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ಸಹ ತೆಲುಗಿನಲ್ಲಿ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಗಳಿಸಿಕೊಂಡಿತ್ತು. ರಕ್ಷಿತ್ ಶೆಟ್ಟಿಯ ಸಿನಿಮಾಗಳಿಗೆ ತೆಲುಗಿನಲ್ಲಿ ಉತ್ತಮ ಬೇಡಿಕೆಯೇ ಇದೆ. ಹಾಗಾಗಿ ಅಲ್ಲಿ ‘ಸಪ್ತ ಸಾಗರಾಲು ದಾಟಿ’ ಸಿನಿಮಾ ಉತ್ತಮ ಪ್ರದರ್ಶನ ಕಾಣಬಹುದೆಂಬ ನಿರೀಕ್ಷೆ ರಕ್ಷಿತ್ ಶೆಟ್ಟಿ ಹಾಗೂ ತಂಡದ್ದು.
ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಎರಡನೇ ಭಾಗ ಅಥವಾ ಸೈಡ್-ಬಿ ಅಕ್ಟೋಬರ್ 20ಕ್ಕೆ ತೆರೆಗೆ ಬರಲಿದೆ. ಈಗ ತೆಲುಗಿನಲ್ಲಿ ಬಿಡುಗಡೆ ಆಗಿರುವ ‘ಸಪ್ತ ಸಾಗರಾಲು ದಾಟಿ’ ಸಿನಿಮಾ ಹಿಟ್ ಆದರೆ ಎರಡನೇ ಭಾಗವೂ ಬಿಡುಗಡೆ ಆಗಲಿದೆ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದು, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಎರಡನೇ ಭಾಗದಲ್ಲಿ ಚೈತ್ರಾ ಆಚಾರ್ ನಾಯಕಿಯಾಗಿರಲಿದ್ದಾರೆ.
ಸಿನಿಮಾ ನೋಡಿದ ಹಲವರು ನವಿರು ಪ್ರೇಮಕತೆಗೆ ಮನಸೋತಿದ್ದಾರೆ. ಸಿನಿಮಾದ ಹಾಡುಗಳು, ರಕ್ಷಿತ್-ರುಕ್ಮಿಣಿಯ ನಟನೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಬಹಳ ದಿನಗಳ ಬಳಿಕ ಒಂದೊಳ್ಳೆ ಪ್ರೇಮಕತೆ ಕನ್ನಡದಲ್ಲಿ ಬಂದಿದೆ ಎಂಬ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿವೆ.