ಸಪ್ತಮಿ ಗೌಡ. ಇತ್ತೀಚೆಗೆ ತಾನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಪ್ಪು ಸಮಾಧಿಗೆ ಭೇಟಿ ಕೊಟ್ಟು, ಕಣ್ಮುಚ್ಚಿ ಪ್ರಾರ್ಥಿಸಿದ ಸಪ್ತಮಿ, ಸಮಾಧಿ ಭೇಟಿಗೆ ಬಂದಿದ್ದವರಿಗೆಲ್ಲ ಸೆಲ್ಫಿ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿಯೇ ಸಪ್ತಮಿ ಗೌಡ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಕಾಂತಾರದ ಲೀಲ ಇವರೇನಾ ಎಂದು ಅಚ್ಚರಿಪಡುವಷ್ಟು ಮುದ್ದು ಮುದ್ದಾಗಿ ಕಾಣಿಸ್ತಿದ್ದಾರೆ ಸಪ್ತಮಿ ಗೌಡ.
ಅದೊಂದು ವೀಕೆಂಡ್. ಅಮ್ಮನ ಜೊತೆ ಹೊರಗೆ ಸುತ್ತಾಡೋಕೆ ಹೋಗಿದ್ದೆ. ಹೊಂಬಾಳೆಯವರಿಗೆ ಫೋನ್ ಬಂತು. ಸ್ವಲ್ಪ ಆಫೀಸಿಗೆ ಬರಬಹುದಾ ಅಂತಾ.. ಅಲ್ಲಿಗೆ ಹೋದರೆ ಯುವ ರಾಜ್ ಕುಮಾರ್ ಜೊತೆ ಫೋಟೋಶೂಟ್ ಮಾಡಿಸಿದ್ರು. ಆಗ ಕೂಡಾ ಅವರು ಯಾಕೆ ಫೋಟೋಶೂಟ್ ಮಾಡಿಸ್ತಿದ್ದಾರೆ ಅನ್ನೋದು ಗೊತ್ತಿರಲಿಲ್ಲ. ಎಲ್ಲ ಆದ ಮೇಲೆ ನೀವೇ ಚಿತ್ರಕ್ಕೆ ಹೀರೋಯಿನ್ ಎಂದರು ಎಂದಿರುವ ಸಪ್ತಮಿ ಗೌಡ ಚಿತ್ರೀಕರಣದ ವೇಳೆ ಕಾಲೇಜು ದಿನಗಳು ನೆನಪಾದವರು ಎಂದು ನೆನಪಿಸಿಕೊಳ್ಳುತ್ತಾರೆ.
ಹೊಂಬಾಳೆಯವರ ಯುವ ಚಿತ್ರದ ಮೂಲಕ ಯುವ ರಾಜ್ ಕುಮಾರ್ ಲಾಂಚ್ ಆಗುತ್ತಿದ್ದಾರೆ. ಸಪ್ತಮಿಗೌಡ ನಾಯಕಿಯಾಗಿರುವ ಚಿತ್ರಕ್ಕೆ ಸಂತೋಷ್ ಆನಂದರಾಮ್ ನಿರ್ದೇಶಕರು. ಡಿ.22ಕ್ಕೆ ಯುವ ಚಿತ್ರ ರಿಲೀಸ್ ಆಗಲಿದೆ.