ಅಂಬರೀಷ್ ಮನೆಗೆ ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ಸಂಭ್ರಮ. ಅವಿವಾ ಬಿದ್ದಪ್ಪ ಜೊತೆಗೆ ಹಸೆಮಣೆಯೇರಿದ ಅಭಿಷೇಕ್ ಅಂಬರೀಷ್ ಆರತಕ್ಷತೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ಅಂಬರೀಷ್ ಪುತ್ರನ ಮದುವೆಗೆ ರಜನಿಕಾಂತ್, ಚಿರಂಜೀವಿ, ಮೋಹನ್ ಬಾಬು, ಸುಹಾಸಿನಿ, ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದೀಗ ಆರತಕ್ಷತೆ..
ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಎಸ್.ಎಂ.ಕೃಷ್ಣ, ಬಸವರಾಜ ಬೊಮ್ಮಾಯಿಮಹಾರಾಜ ಯದುವೀರ್ ಒಡೆಯರ್, ಸಚಿವರಾದ ಕೆ.ಜೆ. ಜಾರ್ಜ್, ಜಮೀರ್ ಅಹ್ಮದ್, ಎಂ.ಬಿ.ಪಾಟೀಲ್, ಗರುಡಾಚಾರ್.. ಮತ್ತಿತರರು.. ರಾಷ್ಟ್ರಮಟ್ಟದ ನಾಯಕರಾದ ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಅಜಾದ್, ಫಾರೂಕ್ ಅಬ್ದುಲ್ಲಾ, ಸುಶೀಲ್ ಕುಮಾರ್ ಶಿಂಧೆ, ಪ್ರತಾಪ್ ಸಿಂಹ ಮತ್ತಿತರರು..
ಚಿತ್ರರಂಗದಿಂದ ನಟರಾದ ಶಿವಣ್ಣ, ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ಜಾಕಿಶ್ರಾಫ್, ಶತ್ರುಘ್ನ ಸಿನ್ಹಾ, ರವಿಚಂದ್ರನ್ ಕುಟುಂಬ, ಚಿರಂಜೀವಿ, ರಮ್ಯಾ, ಗಣೇಶ್, ವಸಿಷ್ಠ ಸಿಂಹ-ಹರಿಪ್ರಿಯ, ರಿಷಬ್ ಶೆಟ್ಟಿ ಫ್ಯಾಮಿಲಿ, ಪ್ರಜ್ವಲ್ ದೇವರಾಜ್ ಕುಟುಂಬ, ಅಶಿಕಾ ರಂಗನಾಥ್, ಪ್ರೇಮ್ ದಂಪತಿ, ಧನ್ವೀರ್, ಸೌಂದರ್ಯ ಜಗದೀಶ್, ತಮಿಳು ಚಿತ್ರರಂಗದ ಪ್ರಭು, ಶಿವರಾಜ್ ಕೆ.ಆರ್.ಪೇಟೆ, ನಾಗಶೇಖರ್, ಖುಷ್ಬೂ, ಗಿರಿಜಾ ಲೋಕೇಶ್, ರಮೇಶ್ ಅರವಿಂದ್, .. ಹೀಗೆ ಬಹುತೇಕ ಚಿತ್ರರಂಗವೇ ಸೇರಿತ್ತು. 34 ಬಗೆಯ ತಿಂಡಿ ತಿನಿಸುಗಳಿದ್ದವು. ಎಲ್ಲರಿಗೂ ಒಂದೇ ಊಟದ ವ್ಯವಸ್ಥೆ ಇತ್ತು.