ಕನ್ನಡದಲ್ಲೀಗ 2 ಭಾಗಗಳ ಟ್ರೆಂಡ್ ಶುರುವಾಗಿದೆ. ಇದೀಗ ಅದೇ ಟ್ರೆಂಡ್`ಗೆ ರಕ್ಷಿತ್ ಶೆಟ್ಟಿ ಕೂಡಾ ಸೇರಿಕೊಂಡಿದ್ದಾರೆ. ಅವರೀಗ ಸಪ್ತಸಾಗರದಾಚೆ ಎಲ್ಲೋ ಚಿತ್ರವನ್ನು ಎರಡು ಭಾಗಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ. . 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾದ ಮೂಲಕ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್ ಎಂ ರಾವ್ ದೊಡ್ಡ ಸಕ್ಸಸ್ ನೀಡಿದ್ದರು. ಇದೇ ಜೋಡಿಯ ಎರಡನೇ ಸಿನಿಮಾ ಸಪ್ತಸಾಗರದಾಚೆ ಎಲ್ಲೋ..
ಅಂದಹಾಗೆ ಇತ್ತೀಚೆಗೆ ಎರಡು ಭಾಗಗಳ ಟ್ರೆಂಡ್ ಶುರುವಾಗಿದೆ. ಬಾಹುಬಲಿ-ಬಾಹುಬಲಿ 2, ಕೆಜಿಎಫ್ ಚಾಪ್ಟರ್ 2 ಮತ್ತು ಚಾಪ್ಟರ್ 2 ಸದ್ಯಕ್ಕೆ ರಿಲೀಸ್ ಆಗಿರುವ ಎರಡು ಭಾಗಗಳಲ್ಲಿ ಬಂದಿರೋ ಸಿನಿಮಾಗಳು. ಅದಾದ ಮೇಲೆ ಶರಣ್-ಸಿಂಪಲ್ ಸುನಿ-ಅಶಿಕಾ ರಂಗನಾಥ್ ಕಾಂಬಿನೇಷನ್ನಿನ ಅವತಾರ್ ಪುರುಷ, ಉಪೇಂದ್ರ-ಆರ್.ಚಂದ್ರು-ಶಿವಣ್ಣ ಕಾಂಬಿನೇಷನ್ನಿನ ಕಬ್ಜ, ಜಗ್ಗೇಶ್-ವಿಜಯ್ ಪ್ರಸಾದ್-ಆದಿತಿ ಪ್ರಭುದೇವ ಜೋಡಿಯ ತೋತಾಪುರಿ ಚಿತ್ರಗಳು ಘೋಷಣೆ ಮಾಡಿಕೊಂಡಿವೆಯಾದರೂ ಎರಡನೇ ಭಾಗ ರಿಲೀಸ್ ಆಗಿಲ್ಲ. ಅವತಾರ್ ಪುರುಷ ಮತ್ತು ತೋತಾಪುರಿ ಶೂಟಿಂಗ್ ಹಾಗೂ ಇತರೆಲ್ಲ ಕೆಲಸಗಳೂ ಮುಗಿದಿವೆ. ಕಬ್ಜ ಚಿತ್ರದ್ದು ಮಾತ್ರ ಘೋಷಣೆಯಾಗಿದೆ ಬಿಟ್ಟರೆ, ಬೇರೆ ಬೆಳವಣಿಗೆಗಳಾಗಿಲ್ಲ. ಈಗ ಸಪ್ತ ಸಾಗರದಾಚೆ ಎಲ್ಲೋ ಬರುತ್ತಿದೆ.
ಈ ಚಿತ್ರದ ಎರಡು ಪಾರ್ಟ್‍ನ್ನು ಚಿತ್ರತಂಡವು ಪಾರ್ಟ್ 1, ಪಾರ್ಟ್ 2 ಎಂದು ಕರೆದಿಲ್ಲ. ಬದಲಾಗಿ, 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ Siಜe ಂ ಮತ್ತು Siಜe ಃ ಎಂದು ಕರೆದಿದೆ. ರಕ್ಷಿತ್ ಶೆಟ್ಟಿಯ ಹುಟ್ಟುಹಬ್ಬದ ದಿನ ಈ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ. ಹೇಮಂತ್ ಎಂ ರಾವ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಸ್ವತಃ ರಕ್ಷಿತ್ ಶೆಟ್ಟಿ ಅವರೇ ನಿರ್ಮಾಣ ಮಾಡಿದ್ದಾರೆ.
ಇದೇ ಜೂನ್ 15ರಂದು ರಿಲೀಸ್ ಡೇಟ್ ಅನ್ನು ಚಿತ್ರತಂಡ ಘೋಷಣೆ ಮಾಡಲಿದೆ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ Siಜe ಂ ಮತ್ತು Siಜe ಃ ವರ್ಷನ್ಗಳ ರಿಲೀಸ್ ದಿನಾಂಕವನ್ನು ಒಟ್ಟಿಗೆ ಘೋಷಣೆ ಮಾಡಲಾಗುತ್ತಿದೆ. ಒಂದೇ ಸಲಕ್ಕೆ ಪಾರ್ಟ್ 1 ಮತ್ತು ಪಾರ್ಟ್ 2ರ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುತ್ತಿರುವುದು ಬಹುಶಃ ಇದೇ ಮೊದಲು ಇರಬೇಕು. ಇಂತಹ ಪ್ರಯೋಗವನ್ನು ರಕ್ತಚರಿತ್ರ ಚಿತ್ರದಲ್ಲಿ ರಾಮ್ ಗೋಪಾಲ್ ವರ್ಮಾ ಮಾಡಿದ್ದರು, ರಿಲೀಸ್ ಮಾಡಿದ್ದರೂ ಕೂಡಾ. ಆ ಹಾದಿಗೆ ಸೇರುತ್ತಿದೆ ಸಪ್ತಸಾಗರದಾಚೆ ಎಲ್ಲೋ..
ಇನ್ನು, 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾಗೆ ನಾಯಕಿಯರಾಗಿ ರುಕ್ಮಿಣಿ ವಸಂತ್ ಮತ್ತು ಚೈತ್ರಾ ಆಚಾರ್ ಕಾಣಿಸಿಕೊಂಡಿದ್ದಾರೆ.