ಕಳೆದ ತಿಂಗಳು ಕೇರಳದ ತ್ರಿಶೂರ್ನಿಂದ ಕೋಯಿಕ್ಕೋಡ್ಗೆ ತೆರಳುತ್ತಿದ್ದ ಬಸ್ನಲ್ಲಿ ನಟಿ ನಂದಿತಾ ಪ್ರಯಾಣಿಸುತ್ತಿದ್ದರು. ಆಗ ಬಸ್ಸಿನಲ್ಲಿ ಸವದ್ ಶಾ ಎಂಬ ಯುವಕ ಬಂದು ಆಕೆಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ಮೊದಮೊದಲು ನಂದಿತಾಳೊಂದಿಗೆ ಸಹಜವಾಗಿಯೇ ಮಾತಾಡಿದ. ನೀವು ಎಲ್ಲಿಗೆ ಹೋಗುತ್ತಿದ್ದೀರಿ..? ನಿಮ್ಮ ಪ್ರದೇಶದಲ್ಲಿ ಟ್ರಾಫಿಕ್ ಇದೆಯೇ? ನಾನು ಕೂಡ ಅಲ್ಲಿಗೆ ಹೋಗುತ್ತಿದ್ದೇನೆ. ತಿನ್ನಲು ಒಳ್ಳೆಯ ಅಂಗಡಿ ಯಾವುದು ಎಂದು ಆತ ಕೇಳಿದ. ಆದರೆ ಕೆಲವು ನಿಮಿಷಗಳ ನಂತರ, ಸವದ್ ಶಾ ನಂದಿತಾಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ ಎಂದು ಆರೋಪಿಸಲಾಗಿತ್ತು. ನಂತರ ನಟಿಯ ಎದುರೇ ಹಸ್ತಮೈಥುನ ಶುರು ಮಾಡಿದಾಗ ಬೆಚ್ಚಿದ ನಟಿ ನಂದಿತಾ, ತಕ್ಷಣ ಫೇಸ್`ಬುಕ್ಕಿನಲ್ಲಿ ಲೈವ್ ಬಂದು ದೂರು ಕೊಟ್ಟಿದ್ದಾರೆ. ನಂತರ ಕಂಡಕ್ಟರ್`ಗೂ ವಿಷಯ ತಿಳಿದು ಆರೋಪಿ ಸಯ್ಯದ್`ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದು ನಡೆದದ್ದು ಕಳೆದ ತಿಂಗಳು.
ಇದೀಗ ಆರೋಪಿಯನ್ನು ಜೈಲಿಂದ ಬಿಡುಗಡೆ ಮಾಡಲಾಗಿದ್ದು, ಅರೋಪಿ ಸಯ್ಯದ್`ಗೆ ಆಲ್ ಕೇರಳ ಪುರುಷರ ಸಂಘ (ಎಕೆಎಂಎ) ಹಾರ ಹಾಕಿ ಆತನನ್ನು ಅದ್ಧೂರಿಯಾಗಿ ಸ್ವಾಗತಿಸಿದೆ ಎಂದು ತಿಳಿದುಬಂದಿದೆ. ಜೈಲಿನ ಹೊರಗೆ ಯುವಕನನ್ನು ಹೂಮಾಲೆ ಹಾಕಿ ಸನ್ಮಾನಿಸಲಾಯಿತು. ಹೊರಗೆ ಬರುತ್ತಿದ್ದ ವೇಳೆ ಚಪ್ಪಾಳೆ ತಟ್ಟಿ ಹಾರ ಹಾಕಿದ ಘಟನೆ ಅಂತರ್ಜಾಲದಲ್ಲಿ ಬಿಡುಗಡೆಯಾಗಿದ್ದು, ವಿಡಿಯೋದ ವೈರಲ್ ಆಗುತ್ತಿದ್ದು, ಹಲವರು ಸಂಘದ ವರ್ತನೆ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಇದು ಕಮ್ಯೂನಿಸ್ಟ್ ರಾಜ್ಯ ಕೇರಳದಲ್ಲಿ ಮಾತ್ರ ಸಾಧ್ಯ ಎಂದೂ ಟ್ವೀಟ್ ಮಾಡುತ್ತಿದ್ದಾರೆ.
ಕೆಎಸ್`ಆರ್`ಟಿಸಿ ಎಂದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಎಂದುಕೊಳ್ಳಬೇಡಿ. ಕೇರಳ ರಸ್ತೆ ಸಾರಿಗೆ ನಿಗಮಕ್ಕೂ ಕೆಎಸ್`ಆರ್`ಟಿಸಿ ಎಂದೇ ಕರೆಯುತ್ತಾರೆ.