` ಹೊರಾಂಗಣ ಯುನಿಟ್ ಬೇಡಿಕೆ ಈಡೇರಿಕೆಗೆ 15 ದಿನ ಗಡುವು : ಏನು ಮಾಡುತ್ತೆ ಫಿಲ್ಮ್ ಚೇಂಬರ್? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಹೊರಾಂಗಣ ಯುನಿಟ್ ಬೇಡಿಕೆ ಈಡೇರಿಕೆಗೆ 15 ದಿನ ಗಡುವು : ಏನು ಮಾಡುತ್ತೆ ಫಿಲ್ಮ್ ಚೇಂಬರ್?
ಹೊರಾಂಗಣ ಯುನಿಟ್ ಬೇಡಿಕೆ ಈಡೇರಿಕೆಗೆ 15 ದಿನ ಗಡುವು : ಏನು ಮಾಡುತ್ತೆ ಫಿಲ್ಮ್ ಚೇಂಬರ್?

ಕ್ಯಾಮೆರಾಮನ್ ಬಳಿ ಇರುವವರೇ ಅನಧಿಕೃತವಾಗಿ ಜನರೇಟರ್, ಲೈಟ್, ಯುನಿಟ್ ಮಾಡಿಕೊಂಡು ಬಾಡಿಗೆ ಕೊಡುತ್ತಿದ್ದಾರೆ. ಪ್ಯಾಕೇಜ್ ಹೆಸರಲ್ಲಿ ಕಡಿಮೆ ಹಣಕ್ಕೆ ಹೇಳ್ತಾರೆ. ಆಮೇಲೆ ದುಬಾರಿ ವಸೂಲಿ ಮಾಡ್ತಾರೆ. ಇದರಿಂದ ಇತ್ತ ನಿರ್ಮಾಪಕರಿಗೂ ಮೋಸ. ಅತ್ತ ನೋಂದಾಯಿತ ಸಂಘಟನೆಗಳಿಗೂ ಮೋಸ.

ಎಂಟು ಲೈಟ್ಮೆನ್ಗಳನ್ನು ಕೆಲಸಕ್ಕೆ ಕಳಿಸಿ 10 ಜನರ ಭತ್ಯೆ ಪಡೆದುಕೊಳ್ಳಲಾಗುತ್ತಿದೆ. ಯೂನಿಟ ಸದಸ್ಯರ ಮಾಹಿತಿ ಕೇಳಿದರೆ ನಾವು ಸಂಘದಲ್ಲಿಲ್ಲ ಎಂದು ಹೇಳುತ್ತಾರೆ. ನಿರ್ಮಾಪಕರಿಂದ ಹೆಚ್ಚಿನ ಹಣ ಪಡೆದು ಕಾರ್ಮಿಕರಿಗೆ ಕಡಿಮೆ ಹಣ ನೀಡುತ್ತಿದ್ದಾರೆ.

40-50 ಜನ ಯೂನಿಟ್ ಸರಬರಾಜು ಮಾಡುತ್ತಿದ್ದಾರೆ. ಇದರಲ್ಲಿ ಒಬ್ಬರೂ ಸಹ ವಾಣಿಜ್ಯ ಮಂಡಳಿ ಸದಸ್ಯರಾಗಿಲ್ಲ. ಅತ್ತ ಚಿತ್ರರಂಗಕ್ಕೆ ನೀಡಲಾಗುವ ಸಬ್ಸಿಡಿಯಲ್ಲೂ ಕೂಡಾ ಅನಧಿಕೃತ ಸಂಘಟನೆಗಳ ಮೊಹರು, ಸೀಲ್ ಬಳಸಿ ಅತ್ತ ಸರ್ಕಾರಕ್ಕೂ ಮೋಸ ಮಾಡುತ್ತಿದ್ದಾರೆ..

ಹೀಗೆ ಹತ್ತು ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಜೂನ್ 5ರಿಂದ ಮುಷ್ಕರದ ಎಚ್ಚರಿಕೆ ಕೊಟ್ಟಿದ್ದ ಹೊರಾಂಗಣ ಚಿತ್ರೀಕರಣ ಘಟಕ ಈಗ ಮುಷ್ಕರ ವಾಪಸ್ ಪಡೆದುಕೊಂಡಿದೆ.

ಹೊರಾಂಗಣ ಚಿತ್ರೀಕರಣ ಘಟಕದ ಅಧ್ಯಕ್ಷ ಎ.ಹೆಚ್. ಭಟ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 15 ದಿನಗಳ ನಂತರ ಕ್ರಮ ತೆಗೆದುಕೊಳ್ಳದೇ ಹೋದರೆ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎ.ಹೆಚ್.ಭಟ್.