ರುಕ್ಮಿಣಿ ವಸಂತ್. ಈ ಹುಡುಗಿ ಎಂಟ್ರಿ ಕೊಟ್ಟಿದ್ದು ಶ್ರೀನಿ ನಿರ್ದೇಶನದ ಬೀರ್`ಬಲ್ ಚಿತ್ರದಿಂದ. ಆನಂತರ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್ ಎಂ ರಾವ್ ಅವರ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾಗೆ ನಾಯಕಿಯಾದರು ರುಕ್ಮಿಣಿ. ಆದರೆ ಆ ಸಿನಿಮಾವು ತೆರೆಗೆ ಬರುವ ಮುನ್ನವೇ ರುಕ್ಮಿಣಿ ವಸಂತ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಇದೀಗ ರುಕ್ಮಿಣಿ ವಸಂತ್ ಅವರ ಕೈಲಿ 'ಗೋಲ್ಡನ್ ಸ್ಟಾರ್' ಗಣೇಶ್ ಜೊತೆಗೆ ಬಾನ ದಾರಿಯಲ್ಲಿ, ಹೊಂಬಾಳೆ ಫಿಲ್ಮ್ಸ್ನ ಬಹುನಿರೀಕ್ಷಿತ ಶ್ರೀಮುರಳಿ ಹೀರೋ ಆಗಿರುವಬಘೀರ, ತಮಿಳಿನಲ್ಲಿ ವಿಜಯ್ ಸೇತುಪತಿ ಜೊತೆಗೊಂದು ಸಿನಿಮಾ ಇವೆ. ಇವೆಲ್ಲದರ ಜೊತೆಗೆ ಈಗ ಬೈರತಿ ರಣಗಲ್ ಚಿತ್ರಕ್ಕೂ ರುಕ್ಮಿಣಿಯೇ ಹೀರೋಯಿನ್.
ಕನ್ನಡದಲ್ಲಿ ರುಕ್ಮಿಣಿ ವಸಂತ್ ಅವರ 2 ಸಿನಿಮಾಗಳು ಈ ವರ್ಷ ತೆರೆಗೆ ಬರಲು ಸಿದ್ಧವಾಗಿದ್ದರೆ, ಇನ್ನೆರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ. ಮಫ್ತಿಯಲ್ಲಿ ಶಿವರಾಜ್ಕುಮಾರ್ ಅವರಿಗೆ ನಾಯಕಿ ಇರಲಿಲ್ಲ. ಶಿವಣ್ಣನ ತಂಗಿಯಾಗಿ ಛಾಯಾಸಿಂಗ್ ಬಣ್ಣ ಹಚ್ಚಿದ್ದರು. ಅಲ್ಲಿ ಅಣ್ಣ-ತಂಗಿ ಎಮೋಷನ್ಸ್ ಹೈಲೈಟ್ ಆಗಿತ್ತು. ಇನ್ನು, ಶ್ರೀಮುರಳಿಗೆ ಜೋಡಿಯಾಗಿ ಶಾನ್ವಿ ಶ್ರೀವಾಸ್ತವ ಇದ್ದರು.
ಭೈರತಿ ರಣಗಲ್, ಮಫ್ತಿ ಚಿತ್ರದ ಪ್ರಿಕ್ವೇಲ್ ಆಗಿರುವುದರಿಂದ ಶಿವಣ್ಣನಿಗೆ ನಾಯಕಿ ಇರಬಹುದು ಎಂಬ ಊಹೆ ಇತ್ತು. ಅದರಂತೆಯೇ ರುಕ್ಮಿಣಿ ವಸಂತ್ ನಾಯಕಿಯಾಗಿದ್ದಾರೆ. 'ಭೈರತಿ ರಣಗಲ್' ಚಿತ್ರವನ್ನು ನರ್ತನ್ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ನಿರೀಕ್ಷೆ ಜೋರಾಗಿದೆ. ವೇದ ಚಿತ್ರದ ನಂತರ ಗೀತಾ ಪಿಕ್ಚರ್ಸ್ ಮೂಲಕವೇ ಬೈರತಿ ರಣಗಲ್ ನಿರ್ಮಾಣವಾಗುತ್ತಿರುವುದು ವಿಶೇಷ.