` ಕನ್ನಡ ಚಿತ್ರರಂಗಕ್ಕೆ ಜೆಕೆ ಗುಡ್ ಬೈ : ಬೆದರಿಕೆ ಹಾಕಿದ್ದು ಯಾರು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕನ್ನಡ ಚಿತ್ರರಂಗಕ್ಕೆ ಜೆಕೆ ಗುಡ್ ಬೈ : ಬೆದರಿಕೆ ಹಾಕಿದ್ದು ಯಾರು?
Jayram Karthik Image

ಕಾರ್ತಿಕ್ ಜಯರಾಮ್. ಹಾಗೆಂದರೆ ಯಾರಿದು ಎನ್ನುವವರೇ ಹೆಚ್ಚು. ಏಕೆಂದರೆ ಈ ಕಲಾವಿದ ಕನ್ನಡಿಗರಿಗೆ ಜೆಕೆ ಎಂದೇ ಪರಿಚಿತ. ಈ ನಟ ಈಗ ಕನ್ನಡ ಚಿತ್ರರಂಗವನ್ನೇ ತೊರೆಯುತ್ತಿದ್ದಾರಂತೆ. ಜೆಕೆ ಹಾಗೆ ಕನ್ನಡ ಚಿತ್ರರಂಗವನ್ನು ತೊರೆಯುತ್ತಿರುವುದಕ್ಕೆ ಕಾರಣ ಕನ್ನಡದ ಇನ್ನೊಬ್ಬ ಕಲಾವಿದ. ಯಾರು ಎನ್ನುವುದನ್ನು ಜೆಕೆ ಹೇಳುವುದಿಲ್ಲ. ಆದರೆ ತಮ್ಮೆಲ್ಲ ಶಕ್ತಿ ಬಳಸಿ, ಜೆಕೆಗಿರುವ ಆಫರ್`ಗಳನ್ನು ತಪ್ಪಿಸುತ್ತಿದ್ದಾರಂತೆ.

ಹಿಂದಿ ಧಾರಾವಾಹಿ ಮಾಡುತ್ತಿದ್ದೆ ಒಳ್ಳೆಯ ಹೆಸರು ಗಳಿಸಿದ್ದೆ. ಹಿಂದಿ ಸಿನಿಮಾ ಒಂದರ ಅವಕಾಶ ಸಹ ನನಗೆ ದೊರಕಿತ್ತು ಇನ್ನೇನು ಚಿತ್ರೀಕರಣ ಪ್ರಾರಂಭವಾಗಬೇಕು ಎಂಬ ಸಮಯದಲ್ಲಿ ಅಲ್ಲಿಗೆ ಕರೆ ಮಾಡಿ ನನಗೆ ಸಿಕ್ಕ ಅವಕಾಶವನ್ನು ತಪ್ಪಿಸಲಾಯ್ತು. ಇಲ್ಲಿಯೂ ಸಹ ನನಗೆ ಬರಬೇಕಿದ್ದ ಅವಕಾಶವನ್ನು ತಪ್ಪಿಸಿದರು. ನನಗೇ ನೇರವಾಗಿ ಸವಾಲು ಹಾಕಿ 2022 ರ ವೇಳೆಗೆ ಇಂಡಸ್ಟ್ರಿ ಬಿಡುಸುತ್ತೇವೆ ಎಂದರು ಎನ್ನುವ ಜೆಕೆ, ಆತ ಯಾರು ಎನ್ನುವುದನ್ನು ಮಾತ್ರ ಹೇಳೋದಿಲ್ಲ. ಯಾರಿಗೆ ಎಂದು ಹೇಳಿದರೆ ವಿವಾದವಾಗುತ್ತದೆ, ಅದಕ್ಕೆ ಪೂರಕವಾದ ವಿಡಿಯೋ ಸಾಕ್ಷಿಗಳನ್ನೆಲ್ಲ ಒದಗಿಸಬೇಕಾಗುತ್ತದೆ ಅವೆಲ್ಲವೂ ನನ್ನ ಬಳಿ ಇಲ್ಲ. ಆದರೆ ನೇರವಾಗಿ ಹೇಳಿದ ವಿಚಾರಗಳಿಗೆ ನಾನು ಮಾತ್ರವೇ ಸಾಕ್ಷಿ. ಆ ವಿಷಯಗಳನ್ನೆಲ್ಲ ಹೇಳಲು ನಾನು ಬಯಸುವುದಿಲ್ಲ. ಆದರೆ ಚಿತ್ರರಂಗದಿಂದ ದೂರ ಹೋಗುವ ವಿಚಾರವನ್ನಂತೂ ಮಾಡಿದ್ದೇನೆ” ಎಂದಿದ್ದಾರೆ.

ಬೇರೆ ಉದ್ಯೋಗದಲ್ಲಿದ್ದೆ. ನಡುನಡುವೆ ನಟಿಸುತ್ತಿದ್ದೆ. ಅಶ್ವಿನಿ ನಕ್ಷತ್ರ ಧಾರಾವಾಹಿಯ ನಂತರ ಎರಡು ಕಡೆ ಪಯಣ ಒಳ್ಳೆಯದಲ್ಲ ಎನ್ನಿಸಿತು. ಹೀಗಾಗಿ ನಟನೆಯನ್ನೇ ಪೂರ್ಣ ಉದ್ಯೋಗ ಮಾಡಿಕೊಂಡೆ ಎನ್ನುವ ಜೆಕೆ, ಅಶ್ವಿನಿ ನಕ್ಷತ್ರ ಧಾರಾವಾಹಿಯ ಹೆಂಡ್ತಿ ಡೈಲಾಗ್ ಮೂಲಕ ಫೇಮಸ್ ಆದವರು. ಸೀಯಾರಾಮ್ ಧಾರಾವಾಹಿಯ ರಾವಣನ ಪಾತ್ರ, ಜೆಕೆಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಸುದೀಪ್ ಅವರ ಆಪ್ತಬಳಗದಲ್ಲಿದ್ದ ಜೆಕೆ, ಸುದೀಪ್ ಜೊತೆ ಹಲವು ಚಿತ್ರಗಳಲ್ಲಿ ನಟಿಸಿದ್ದವರು.