ಅಜನೀಶ್ ಲೋಕನಾಥ್. ಈಗ ಸ್ಯಾಂಡಲ್`ವುಡ್ ಸೆನ್ಸೇಷನ್ ಮ್ಯೂಸಿಕ್ ಡೈರೆಕ್ಟರ್. ರೆಗ್ಯುಲರ್ ಜಾನರ್ ಮ್ಯೂಸಿಕ್`ನ್ನು ಬ್ರೇಕ್ ಮಾಡಿರುವ ಅಜನೀಶ್, ಬೇರೆಯದೇ ರಿದಂ ತೋರಿಸುತ್ತಿದ್ದಾರೆ. ಅತ್ತ ಉಪ್ಪಿ, ರೆಗ್ಯುಲರ್ ಜಾನರ್ ಬಿಟ್ಟೇ ಸಿನಿಮಾ ಮಾಡುವವರು. ಇವರಿಬ್ಬರೂ ಈಗ ಯುಐ ಚಿತ್ರಕ್ಕೆ ಒಂದುಗೂಡಿದ್ದಾರೆ. ಯುಐ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟರ್ ಆಗಿ ಎಂಟ್ರಿ ಕೊಟ್ಟಿದ್ದಾರೆ ಅಜನೀಶ್ ಲೋಕನಾಥ್.
ಮನೋಹರ್ ನಾಯ್ಡು ಅವರ ಲಹರಿ ಫಿಲ್ಮ್ಸ್ ಮತ್ತು ಕೆಪಿ ಶ್ರೀಕಾಂತ್ ಅವರ ವೀನಸ್ ಎಂಟರ್ಟೈನರ್ಸ್ ನಿರ್ಮಿಸಿದ UI ನಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಸನ್ನಿ ಲಿಯೋನ್, ನಿಧಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಯುಐ ಚಿತ್ರದ ಶೂಟಿಂಗ್ ಪೈನಲ್ ಹಂತದಲ್ಲಿದ್ದು, ಇನ್ನೊಂದು ತಿಂಗಳು ಚಿತ್ರೀಕರಣವಾದರೆ, ಶೂಟಿಂಗ್ ಮುಗಿದಂತೆಯೇ. ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸವೂ ಹೆಚ್ಚಾಗಿದೆ. ನವೀನ್ ಮನೋಹರ್ ಚಿತ್ರದ ಗ್ರಾಫಿಕ್ಸ್ ಡಿಸೈನ್ ನೋಡಿಕೊಳ್ಳುತ್ತಿದ್ದಾರೆ. ಅದು ಸುಲಭದ್ದಲ್ಲ. 3ಡಿ ಸೆಟ್ಟಿಂಗ್ಸ್ ಬೇಕು. 200ಕ್ಕೂ ಹೆಚ್ಚು ಡಿಎಸ್‍ಎಲ್‍ಆರ್ ಕ್ಯಾಮೆರಾಗಳ ಮೂಲಕವೇ ಗ್ರಾಫಿಕ್ಸ್ ಡಿಸೈನಿಗೆ ತಕ್ಕಂತೆ ಶೂಟಿಂಗ್ ಆಗಬೇಕು. ಹೀಗೆ ಹಲವು ಹೊಸ ಹೊಸ ಪ್ಲಾನ್`ಗಳೊಂದಿಗೆ ಯುಐ ಶೂಟಿಂಗ್ ನಡೆಯುತ್ತಿದೆ.