` ಧನಂಜಯ ಸಿನಿ ಜರ್ನಿಗೆ 10 ವರ್ಷದ ಸಂಭ್ರಮ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಧನಂಜಯ ಸಿನಿ ಜರ್ನಿಗೆ 10 ವರ್ಷದ ಸಂಭ್ರಮ..
Dhananjaya Image

ಈಗ ಡಾಲಿ ಧನಂಜಯ ಎಂದೇ ಗುರುತಿಸಿಕೊಳ್ತಿರೋ ನಟ ರಾಕ್ಷಸ ಧನಂಜಯ ಅವರು ಚಿತ್ರರಂಗಕ್ಕೆ ಬಂದು 10 ವರ್ಷ ತುಂಬಿದೆ. ಈ ಸಂಭ್ರಮವನ್ನು ಚಿತ್ರರಂಗದ ಸಹ ಕಲಾವಿದರು, ತಂತ್ರಜ್ಞರು, ಅಭಿಮಾನಿಗಳು ಸಂಭ್ರಮಿಸಿದರು. ಆರಂಭದಲ್ಲಿ ಹೀರೋ ಆಗಿ ಬಂದ ಧನಂಜಯ್, ಈಗ ಕೇವಲ ನಟನಲ್ಲ. ನಟರಾಕ್ಷಸ.

ಹೀರೋ ಆಗಿ ಸೋತಾಗ, ಐರನ್ ಲೆಗ್ ಎಂದು ಲೇವಡಿ ಮಾಡಿದಾಗ, ಪೋಷಕ ಮತ್ತು ಖಳ ಪಾತ್ರಗಳ ಮೂಲಕ ಸ್ಟಾರ್ ಆದವರು ಡಾಲಿ. ಹೌದು, ಧನಂಜಯ ಅವರಿಗೆ ಇರೋ ಡಾಲಿ ಅನ್ನೋ ಪೆಟ್ ನೇಮ್ ಟಗರು ಚಿತ್ರದ ವಿಲನ್ ಪಾತ್ರದಿಂದ ಬಂದಿದ್ದು. ಈಗ ಆಡಿಕೊಂಡಿದ್ದವರ ಎದುರೇ ಹೀರೋ ಆಗಿ, ನಿರ್ಮಾಪಕರಾಗಿ ಗೆದ್ದು ತೋರಿಸಿದ್ದಾರೆ. ಜಯನಗರ 4 ಬ್ಲಾಕ್`ನಿಂದ ಶುರುವಾದ ಜರ್ನಿ ಸದ್ಯಕ್ಕೆ ಹೊಯ್ಸಳವರೆಗೆ ಬಂದು ನಿಂತಿದೆ. ನಟಿಸಿದ ಚಿತ್ರಗಳು 25ರ ಗಡಿ ದಾಟಿವೆ.

ಧನಂಜಯ ತಮ್ಮ ಚಿತ್ರಗಳಿಗಷ್ಟೇ ಅಲ್ಲ, ಬೇರೆ ಹೊಸಬರ ಚಿತ್ರಗಳಿಗೂ ನಿರ್ಮಾಪಕರಾಗಿದ್ದಾರೆ. ಟಗರುಪಲ್ಯ, ಡೇರ್ ಡೆವಿಲ್ ಮುಸ್ತಫಾ, ಟಗರುಪಲ್ಯ.. ಹೀಗೆ ಹಲವು ಚಿತ್ರಗಳಿಗೆ ಬೆನ್ನೆಲುಬಾಗಿದ್ದಾರೆ. ಕನ್ನಡದಲ್ಲಿ ಹೀರೋ ಅಷ್ಟೇ ಅಲ್ಲ, ಈ 10 ವರ್ಷಗಳಲ್ಲಿ ಶಿವಣ್ಣ, ದಿ.ಪುನೀತ್, ದುನಿಯಾ ವಿಜಯ್.. ಸೇರಿದಂತೆ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸಿದ್ದಾರೆ. ಮಲಯಾಳಂನ ಪ್ರಯೋಗಾತ್ಮಕ ಚಿತ್ರಗಳಿಗೆ ಇಷ್ಟವಾಗಿದ್ದಾರೆ.

ಡಾಲಿ ಧನಂಜಯ ಅವರ ಚಿತ್ರಜೀವನದ 10ನೇ ವರ್ಷದ ಸಂಭ್ರಮವನ್ನು ಚಿತ್ರರಂಗದವರು ಸಂಭ್ರಮಿಸುವುದೇ ಬೇರೆ. ಅಭಿಮಾನಿಗಳು ಸಂಭ್ರಮಿಸುವುದೇ ಬೇರೆ. ಗೆಲುವು ಸುಮ್ಮನೆ ಸಿಕ್ಕುವುದಿಲ್ಲ.