ಕನ್ನಡ, ತೆಲುಗು ಚಿತ್ರರಂಗದಲ್ಲಿ ಪವಿತ್ರಾ ಲೋಕೇಶ್ ಅವರದ್ದು ಇದೀಗ ದೊಡ್ಡ ಹೆಸರು. ನಟಿಸಿದ್ದು ಪೋಷಕ ಪಾತ್ರಗಳಲ್ಲೇ ಆದರೂ ಪವಿತ್ರಾ ಲೋಕೇಶ್ ಮೂಡಿಸಿದ ಛಾಪು ಬೇರೆ. ಜೊತೆಗೆ ಸದಾ ಸುದ್ದಿಯಲ್ಲಿರುವ ಪವಿತ್ರಾ ಇದೀಗ ಡಾಕ್ಟರೇಟ್ ಪಡೆಯಲು ಹೊರಟಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ವಿಶೇಷ ಅಂದರೆ ಕನ್ನಡ ಸಾಹಿತ್ಯದಲ್ಲಿ ಪಿಹೆಚ್ಡಿ ಮಾಡಲು ಪವಿತ್ರಾ ಲೋಕೇಶ್ ಅರ್ಜಿ ಸಲ್ಲಿಸಿದ್ದಾರೆ.
ಪಿಹೆಚ್ಡಿ ಪ್ರವೇಶ ಪರೀಕ್ಷೆ ಬರೆಯಲು ಹಂಪಿಯ ವಿದ್ಯಾನಗರಕ್ಕೆ ಆಗಮಿಸಿದ ಪವಿತ್ರಾ ಲೋಕೇಶ್ಗೆ ನರೇಶ್ ಬಾಬು ಸಾಥ್ ನೀಡಿದ್ದರು. ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಬಳಿಕ ಕನ್ನಡ ಸಾಹಿತ್ಯದಲ್ಲಿ ಪಿಹೆಚ್ಡಿ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯದಲ್ಲಿ ಸಂಶೋಧನೆಗೆ ಪವಿತ್ರ ಲೋಕೇಶ್ ಮುಂದಾಗಿದ್ದಾರೆ.
ಪವಿತ್ರಾ ಲೋಕೇಶ್ ಅವರ ಈ ನಡೆಯ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಏಕೆಂದರೆ ಚಿತ್ರರಂಗದಲ್ಲಿ ಹಲವರಿಗೆ ಗೌರವ ಡಾಕ್ಟರೇಟ್ ಬಂದಿದೆ. ಆದರೆ ಕೆಲವೇ ಕೆಲವರು ಮಾತ್ರ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದಿದ್ದಾರೆ. ಆ ಸಾಲಿಗೆ ಸೇರಲು ಹೊರಟಿದ್ದಾರೆ ಪವಿತ್ರಾ ಲೋಕೇಶ್.