` ಪುನೀತ್ ಮತ್ತು ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡ ರಾಘಣ್ಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪುನೀತ್ ಮತ್ತು ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡ ರಾಘಣ್ಣ
ಪುನೀತ್ ಮತ್ತು ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡ ರಾಘಣ್ಣ

ಅಪ್ಪು. ಟೋಟೋ ಮತ್ತು ನುಕ್ಕಿ. ಈ ಮೂರೂ ಹೆಸರುಗಳನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ, ರಾಘವೇಂದ್ರ ರಾಜ್`ಕುಮಾರ್. ಧೃತಿ ಮತ್ತು ವಂದಿತಾ ಅಪ್ಪು ಅವರ ಮಕ್ಕಳು. ಅವರ ಹೆಸರನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ ರಾಘಣ್ಣ.

ತಮಗೆ ಹಚ್ಚೆ ಹಾಕಿದ ಟ್ಯಾಟೂ ಆರ್ಟಿಸ್ಟ್ ಜೊತೆಗೂ ರಾಘವೇಂದ್ರ ರಾಜ್ಕುಮಾರ್ ಫೊಟೊ ತೆಗೆಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ, ಆರೋಗ್ಯ ಸಮಸ್ಯೆಗಳ ನಡುವೆ ಸಹೋದರ ಹಾಗೂ ಅವರ ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡ ರಾಘವೇಂದ್ರ ಅವರ ಪ್ರೀತಿಯನ್ನು ಅಪ್ಪು ಅಭಿಮಾನಿಗಳು ಕೊಂಡಾಡಿದ್ದಾರೆ.

ಟೊಟೊ ಹಾಗೂ ನುಕ್ಕಿ ಎಂಬುದು ಅಪ್ಪು ಅವರ ಇಬ್ಬರು  ಹೆಣ್ಣು ಮಕ್ಕಳಾದ ಧೃತಿ ಮತ್ತು ವಂದಿತಾರ ನಿಕ್ ನೇಮ್. ಅಪ್ಪು ಅವರ ಇಬ್ಬರು ಹೆಣ್ಣು ಮಕ್ಕಳ ಬಗ್ಗೆಯಂತೂ ರಾಘವೇಂದ್ರ ರಾಜ್ಕುಮಾರ್ ಅವರಿಗೆ ಮೊದಲಿನಿಂದಲೂ ಬಹಳ ಮಮಕಾರ. ಅಪ್ಪು ಕಾಲವಾದ ಸಂದರ್ಭದಲ್ಲಿ ಅವರ ಮಕ್ಕಳನ್ನು ನೆನೆದು ರಾಘವೇಂದ್ರ ರಾಜ್ಕುಮಾರ್ ಬಹಳ ದುಖಃ ವ್ಯಕ್ತಪಡಿಸಿದ್ದರು.

ರಾಘಣ್ಣ ಅವರಿಗೆ ಆರೋಗ್ಯ ತುಸು ಹದಗೆಟ್ಟಿತ್ತು. ಈಗಲೂ ಕೂಡಾ ಅವರು ಸವಾಲಿನ ಜೊತೆಯಲ್ಲೇ ಹೆಜ್ಜೆ ಹಾಕುತ್ತಿದ್ದಾರೆ. ಹೀಗಿರುವಾಗ ಹಚ್ಚೆ ಹಾಕಿಸಿಕೊಳ್ಳೋ ಅಗತ್ಯವಿತ್ತೇ ರಾಘಣ್ಣ, ಅವರು ನಿಮೃ ಹೃದಯದಲ್ಲಿದ್ದಾರೆ, ಸಾಕಲ್ವಾ ಎಂದು ರಾಘಣ್ಣ ಬಗ್ಗೆ ಕಾಳಜಿ ತೋರಿಸಿದವರೂ ಇದ್ದಾರೆ.