ತೆಲುಗಿನ ಉದಯೋನ್ಮುಖ ಸ್ಟಾರ್ ನಟರಲ್ಲಿ ಒಬ್ಬರಾದ ಶರ್ವಾನಂದ್ ಅಪಘಾತಕ್ಕೀಡಾಗಿದ್ದಾರೆ. ಅದೂ ಮದುವೆಗೆ ಕೇವಲ 5 ದಿನ ಇರುವಾಗ ಆಗಿರುವ ಆಕ್ಸಿಡೆಂಟ್ ಇದು. ಹೈದಾರಾಬಾದ್ ಫಿಲ್ಮ್ ನಗರ್ ಜಂಕ್ಷನ್ ಬಳಿ ಶರ್ವಾನಂದ್ ಅವರ ರೇಂಜ್ ರೋವರ್ ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಶರ್ವಾನಂದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕ ಪುಟ್ಟ ಗಾಯಗಳಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶರ್ವಾನಂದ್ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶ್ರೀರಾಮ್ ಆದಿತ್ಯ ಅವರೊಂದಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು ಕೃತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಮದುವೆಯ ಬ್ಯುಸಿಯಲ್ಲಿದ್ದ ಶರ್ವಾನಂದ್ ಸಿನಿಮಾಗಳ ಶೂಟಿಂಗ್ ಬೇಗ ಮುಗಿಸುವ ತರಾತುರಿಯಲ್ಲಿದ್ದಾರೆ. ಈ ನಡುವೆ ಕಾರು ಅಪಘಾತಕ್ಕೀಡಾಗಿರುವುದು ಶರ್ವಾನಂದ್ ಸ್ಪೀಡ್ಗೆ ಬ್ರೇಕ್ ಹಾಕಿದೆ.
ಶರ್ವಾಂದ್ ಇತ್ತೀಚೆಗಷ್ಟೆ ರಕ್ಷಿತಾ ರೆಡ್ಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜೂನ್ 2 ಮತ್ತು 3 ರಂದು ನಡೆಯುವ ಶರ್ವಾನಂದ್ ಮದುವೆ ಇದ್ದು ಮದುವೆಗೂ 5 ದಿನಗಳು ಬಾಕಿ ಇರುವಾಗ ಈ ದುರಂತ ಸಂಭವಿಸಿದೆ. ರಾಜಸ್ಥಾನದ ಜೈಪುರದಲ್ಲಿರುವ ಲೀಲಾ ಪ್ಯಾಲೇಸ್ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆಯುತ್ತಿದೆ. ಈ ನಡುವೆ ಶರ್ವಾನಂದ್ ಕಾರಿಗೆ ಅಪಘಾತವಾಗಿರುವುದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಶರ್ವಾನಂದ್ ಕ್ಷೇಮವಾಗಿದ್ದಾರೆ ಎಂದು ಅವರ ತಂಡ ಸ್ಪಷ್ಟನೆ ನೀಡಿದೆ.