` ಆಶಿಶ್ ವಿದ್ಯಾರ್ಥಿ ಎರಡನೇ ಮದುವೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಆಶಿಶ್ ವಿದ್ಯಾರ್ಥಿ ಎರಡನೇ ಮದುವೆ
Ashish Vidyarthim ties knot to Rupali Barua

ಆಶಿಶ್ ವಿದ್ಯಾರ್ಥಿ. ವಯಸ್ಸು 60. ಇದೀಗ ಮತ್ತೊಮ್ಮೆ ಮದುವೆಯಾಗಿದ್ದಾರೆ. ನಟ ಆಶೀಶ್ ವಿದ್ಯಾರ್ಥಿ ಈ ಹಿಂದೆ ರಾಜೋಶಿ ಬರುವಾ ಅವರನ್ನ ಮದುವೆಯಾಗಿದ್ದರು. ಈ ದಂಪತಿಗೆ ಓರ್ವ ಪುತ್ರನಿದ್ದಾನೆ. ಖ್ಯಾತ ನಟಿ ಶಕುಂತಲಾ ಬರುವಾ ಅವರ ಪುತ್ರಿ ರಾಜೋಶಿ ಬರುವಾ ಕೂಡ ನಟಿ, ರಂಗಭೂಮಿ ಕಲಾವಿದೆ ಹಾಗೂ ಗಾಯಕಿ. ಈಗ ಮದುವೆಯಾಗಿರುವುದು ರೂಪಾಲಿ ಬರುವಾ ಅವರನ್ನ. ಈ ರೂಪಾಲಿ ಮೂಲತಃ ಅಸ್ಸಾಮಿನ ಗೌಹಾಟಿಯವರು. ಈಗ ಕೊಲ್ಕೊತ್ತಾದಲ್ಲಿ ಫ್ಯಾಷನ್ ಉದ್ಯಮಿ.

ಎ ಕೆ 47, ನಂದಿ, ದುರ್ಗಿ, ವಂದೇ ಮಾತರಂ, ಕೋಟಿಗೊಬ್ಬ, ಸೈನಿಕ, ಆಕಾಶ್’ ಆ ದಿನಗಳು..  ಮುಂತಾದ ಚಿತ್ರಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಖ್ಯಾತಿ ಪಡೆದಿರುವ ಖಳನಟ ಆಶೀಶ್ ವಿದ್ಯಾರ್ಥಿ, ಹಿಂದಿ, ತೆಲುಗು, ತಮಿಳು.. ಹೀಗೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.

1942 ಎ ಲವ್ ಸ್ಟೋರಿ, ವಾಸ್ತವ್, ಬ್ರಹ್ಮಾಸ್ತ್ರ, ದ್ರೋಹ್ ಕಾಲ್.. ತೆಲುಗಿನಲ್ಲಿ ಪೊಕಿರಿ.. ಹೀಗೆ ಒಟ್ಟಾರೆ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ರೂಪಾಲಿ ಅವರಿ 33 ವರ್ಷ. ಆಶೀಶ್ ವಿದ್ಯಾರ್ಥಿ ಅವರಿಗೆ 60 ವರ್ಷ. ಇಬ್ಬರದ್ದೂ ಲವ್ ಮ್ಯಾರೇಜ್. ಆದರೆ ಮದುವೆ ಸಿಂಪಲ್ ಆಗಿರಬೇಕು ಎಂಬ ಕಾರಣಕ್ಕೆ ರಿಜಿಸ್ಟರ್ ಮ್ಯಾರೇಜ್ ಆಗಿ, ಕುಟುಂಬದವರೊಂದಿಗೆ ಸಿಂಪಲ್ ಕಾರ್ಯಕ್ರಮ ಇಟ್ಟುಕೊಂಡಿದ್ದರು ಆಶೀಶ್-ರೂಪಾಲಿ ಜೋಡಿ.