` ಹೊಯ್ಸಳ ಭರ್ಜರಿ ಕಲೆಕ್ಷನ್ : ಮೊದಲ ವಾರ ಎಷ್ಟು..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಹೊಯ್ಸಳ ಭರ್ಜರಿ ಕಲೆಕ್ಷನ್ : ಮೊದಲ ವಾರ ಎಷ್ಟು..?
Gurudev Hoysala Movie Image

ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್ ಪ್ರಧಾನ ಪಾತ್ರದಲ್ಲಿರೋ, ನವೀನ್ ಶಂಕರ್ ವಿಲನ್ ಆಗಿ ಆರ್ಭಟಿಸಿರುವ  ಹೊಯ್ಸಳ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ 2ನೇ ವಾರಕ್ಕೆ ಕಾಲಿಟ್ಟಿರುವ ಹೊಯ್ಸಳ ಚಿತ್ರ, ವಿಶೇಷವಾಗಿ ಉತ್ತರ ಕರ್ನಾಟದಲ್ಲಿ ಬೊಂಬಾಟ್ ಕಲೆಕ್ಷನ್ ಮಾಡುತ್ತಿದೆ. ಇದು ಧಂಜಯ್ ನಟನೆಯ 25ನೇ ಸಿನಿಮಾ ಅನ್ನೋದು ಮತ್ತೊಂದು ವಿಶೇಷ.

ಟ್ವಿಟರ್ನಲ್ಲಿ ಒಬ್ಬರು ಹೊಯ್ಸಳ ಕಲೆಕ್ಷನ್ ಮೊದಲ ವಾರ 2.9 ಕೋಟಿ ಕಲೆಕ್ಷನ್ ಮಾಡಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ರಿಯಾಕ್ಷನ್ ನೀಡಿರುವ ನಿರ್ಮಾಪಕ ಕಾರ್ತಿಕ್ ಗೌಡ ಇನ್ನೂ ಜಾಸ್ತಿ ಸರ್ ಎಂದು ರಿಯಾಕ್ಷನ್ ಕೊಟ್ಟಿದ್ಧಾರೆ.

ಗುರುದೇವ್ ಹೊಯ್ಸಳ ಸಿನಿಮಾ ಕಥೆ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತದೆ. ಕನ್ನಡ ಭಾಷಾಭಿಮಾನದ ಜೊತೆ ಜೊತೆಗೆ ಮರ್ಯಾದ ಹತ್ಯೆಯಂತಹ ಸೂಕ್ಷ್ಮ ವಿಷಯವನ್ನೂ ಚಿತ್ರದಲ್ಲಿ ಸೂಕ್ಷ್ಮವಾಗಿ ಮನಮುಟ್ಟುವಂತೆ ತೋರಿಸಲಾಗಿದೆ. ದಕ್ಷ ಪೊಲೀಸ್ ಅಧಿಕಾರಿಯ ಕಾರ್ಯಾಚರಣೆಗೆ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ. ಹೊಯ್ಸಳನ ಪೊಲೀಸ್ಗಿರಿ ಹೇಗಿರುತ್ತದೆ ಅನ್ನೋದನ್ನು ಚಿತ್ರದಲ್ಲಿ ಸಖತ್ ಆಗಿ ತೋರಿಸಲಾಗಿದೆ.  ಬಿಗಿಯಾದ ನಿರೂಪಣೆ ಪ್ಷೇಕ್ಷಕರನ್ನು ಕುರ್ಚಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ. ಚಿತ್ರತಂಡ ಮಾತ್ರ ಖುಷಿಯಾಗಿದೆ. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಮರು ದಿನವೇ ಡಾಲಿ ಧನಂಜಯಗೆ 1 ಕೋಟಿ ರೂ. ಮೌಲ್ಯದ ಟೊಯೋಟೊ ವೆಲ್ಫೈರ್ ಕಾರನ್ನು ನಿರ್ಮಾಪಕರು ಉಡುಗೊರೆಯಾಗಿ ನೀಡಿದ್ದರು.