ಬೋಲ್ಡ್ ಆಗಿ ನಟಿಸುತ್ತಾರೆ ಎಂದರೆ ಅವರು ಎಲ್ಲದಕ್ಕೂ ಸಿದ್ಧರಿರುತ್ತಾರೆ ಅನ್ನೋ ಭಾವನೆ ಒಂದು ಕಾಲದಲ್ಲಿ ಇತ್ತು. ಕನ್ನಡದಲ್ಲಿ ಮೊದಲ ಬಾರಿ ಸ್ವಿಮ್ ಸೂಟ್ ಹಾಕಿದ್ದ ಜಯಂತಿವರಿಂದ ಹಿಡಿದು, ಇತ್ತೀಚಿನ ಹಲವು ನಟಿಯರವರೆಗೆ ಇಂತಹ ಪ್ರಾಬ್ಲಂ ಫೇಸ್ ಮಾಡಿದ್ದವರೇ. ಡಬಲ್ ಮೀನಿಂಗ್ ಡೈಲಾಗ್ ಹೊಡೆಯೋವ್ರನ್ನ ಹಾಗೂ ಚಿತ್ರದಲ್ಲಿ ಕಿಸ್ಸಿಂಗ್, ಬೆಡ್ ರೂಂ ಸೀನುಗಳಲ್ಲಿ ನಟಿಸುವವರನ್ನ ಕೆಲವರು ನೋಡುವ ದೃಷ್ಟಿಯೇ ಬೇರೆ. ಈ ಅನುಭವ ಪೆಂಟಗನ್ ಚಿತ್ರದ ತನಿಷಾ ಕುಪ್ಪಂಡ ಅವರಿಗೂ ಆಗಿದೆ.
ಏಪ್ರಿಲ್ 7ರಂದು ರಿಲೀಸ್ ಆಗುತ್ತಿರುವ ಪೆಂಟಗನ್ ಚಿತ್ರದಲ್ಲಿ ತನಿಷಾ ಕುಪ್ಪಂಡ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹನಿ ಟ್ರ್ಯಾಪ್ ಕಥೆಯಲ್ಲಿ ಬರುವ ಸೀನ್‍ಗಳಲ್ಲಿ ಕಿಸ್ಸಿಂಗ್ ಸೀನ್ ಇದೆ. ಬೆಡ್ ರೂಂ ದೃಶ್ಯಗಳಿವೆ. ಜೊತೆಗೆ ಬ್ಯಾಕ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ರಿಲೀಸ್ ಹತ್ತಿರವಾಗಿರೋ ಕಾರಣ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ ಚಿತ್ರತಂಡ. ಈ ವೇಳೆ ತನಿಷಾ ಕುಪ್ಪಂಡ ಅವರಿಗೆ ಯೂಟ್ಯೂಬರ್ ಒಬ್ಬ ಪ್ರಶ್ನೆ ಕೇಳಿದ್ದಾನೆ. ನೀವು ಬ್ಲೂಫಿಲ್ಮ್`ನಲ್ಲಿ ನಟಿಸೋಕೆ ಸಿದ್ಧರಿದ್ದೀರಾ ಎನ್ನುವುದು ಈತನ ಪ್ರಶ್ನೆ. ತನಿಷಾ ಕೆಂಡಾಮಂಡಲವಾಗಿ ಹೋಗಿದ್ದಾರೆ.
ಹಾಗಿದ್ರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಾರದಿತ್ತು. ನೀಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇರಬೇಕಿತ್ತು. ಬೋಲ್ಡ್ ಆಗಿ ನಟಿಸಿದ್ದೀವಿ ಅಂದ ಮಾತ್ರಕ್ಕೆ.. ಈ ತರಹ ಪ್ರಶ್ನೆ ಕೇಳೋದ್ರಲ್ಲಿ ಅರ್ಥವೇ ಇಲ್ಲ. ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ. ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ.? ಪ್ರಶ್ನೆ ಮಾಡೋಕೂ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ?
ಎಂದು ಹೇಳಿ ಸಂದರ್ಶನದಿಂದ ಎದ್ದು ಹೋಗಿದ್ದಾರೆ ತನಿಷಾ. ಇಡೀ ಪೆಂಟಗನ್ ಚಿತ್ರತಂಡ, ಯೂಟ್ಯೂಬರ್`ನನ್ನು ತರಾಟೆಗೆ ತೆಗೆದುಕೊಂಡಿದೆ. ಅಂದಹಾಗೆ ಇದು ಗುರು ದೇಶಪಾಂಡೆ ನಿರ್ಮಾಣದ ಸಿನಿಮಾ. ಐವರು ನಿರ್ದೇಶಕರು, ಐದು ಕಥೆಗಳಿರೋ ಚಿತ್ರದಲ್ಲಿ ಒಂದು ಚಿತ್ರದಲ್ಲಿ ಹನಿ ಟ್ರ್ಯಾಪ್ ಸ್ಟೋರಿ ಇದೆ. ಆ ಸ್ಟೋರಿ ಇರೋ ಚಿತ್ರದ ದೃಶ್ಯವನ್ನೇ ಆ ಯೂಟ್ಯೂಬರ್ ಅಂತಹ ಪ್ರಶ್ನೆ ಕೇಳಿರುವುದು. ಸಾಮಾಜಿಕ ಜಾಲತಾಣದಲ್ಲಿ ಆಗುವ ಮೋಸ, ಅಪರಾಧ, ಯುವ ಪೀಳಿಗೆಯ ಭವಿಷ್ಯದ ಕುರಿತು ಬೆಳಕು ಚೆಲ್ಲುವ ಸಿನಿಮಾ ಪೆಂಟಗನ್. ಈ ಚಿತ್ರದಲ್ಲಿ ಕಾಮನಬಿಲ್ಲು.. ಹಾಡಿನಲ್ಲಿ ತನಿಷಾ ಕುಪ್ಪಂಡ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ರಾಘು ಶಿವಮೊಗ್ಗ ನಿರ್ದೇಶನದ ಕಥೆಯಲ್ಲಿ ತನಿಷಾ ಕುಪ್ಪಂಡ ನಟಿಸಿದ್ದಾರೆ.