` ನಟ ಚೇತನ್`ಗೆ ಫಿಲ್ಮ್ ಚೇಂಬರ್ ವಾರ್ನಿಂಗ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಟ ಚೇತನ್`ಗೆ ಫಿಲ್ಮ್ ಚೇಂಬರ್ ವಾರ್ನಿಂಗ್
ನಟ ಚೇತನ್`ಗೆ ಫಿಲ್ಮ್ ಚೇಂಬರ್ ವಾರ್ನಿಂಗ್

ಸದಾ ಸುದ್ದಿಯಲ್ಲಿರುವ ನಟ ಚೇತನ್, ಈ ಬಾರಿ ಅಂಬರೀಷ್ ಸ್ಮಾರಕ, ರಸ್ತೆ ವಿಚಾರದಲ್ಲಿ ಸುಮಲತಾ ಅವರನ್ನು ಟೀಕಿಸಿ ಸುದ್ದಿಯಾಗಿದ್ದಾರೆ. ಈ ಕುರಿತು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಟೀಕೆ ಮಾಡಿದ್ದಾರೆ. ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧಿಕೃತವಾಗಿ ಈ ಕುರಿತು ಎಚ್ಚರಿಕೆ ನೀಡಿದೆ.

ಇದೇ 27 ಕ್ಕೆ ಅಂಬರೀಶ್ ಸ್ಮಾರಕ ಉದ್ಘಾಟನೆ ಮಾಡಿದ್ವಿ ಜೊತೆಗೆ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರಿಟ್ಟಿದ್ದೀವಿ, ಆದರೆ ಈ ವಿಚಾರವಾಗಿ ನಟ ಚೇತನ್ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಅಂಬರೀಶ್ ಸ್ಮಾರಕ ನಿರ್ಮಾಣ ಅಥವಾ ರೇಸ್ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಬೇಕು ಎಂಬುದು ಸುಮಲತಾ ಅವರ ಒತ್ತಾಯ ಆಗಿರಲಿಲ್ಲ ಇಡೀಯ ಚಿತ್ರರಂಗದ ಒತ್ತಾಯ ಆಗಿತ್ತು. ಅಂಬರೀಶ್ ಅವರು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ, ಚೇತನ್ ಅಹಿಂಸ ಅವರು ಪದೇ ಪದೇ ಚಿತ್ರರಂಗದ ಒಕ್ಕೂರಲ ಅಭಿಪ್ರಾಯದ ವಿರುದ್ಧ ಸಾರ್ವಜನಿಕ ಆಕ್ಷೇಪ ವ್ಯಕ್ತಪಡಿಸಿ ಮುಜುಗರ ಉಂಟು ಮಾಡುತ್ತಿದ್ದಾರೆ. ಕುಟುಂಬದಲ್ಲಿ ಇದ್ದುಕೊಂಡುಡು ಈ ರೀತಿ ಮಾತನಾಡುವುದು ತಪ್ಪು, ಇಡೀ ಚಿತ್ರರಂಗದ ಅಷ್ಟು ಆಯಾಮಗಳು ಸೇರಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ ಹಾಗಾಗಿ ಸ್ಮಾರಕ ನಿರ್ಮಾಣ ಆಗಿದೆ. ಆದರೆ ಈ ಬಗ್ಗೆ ಚೇತನ್ ಆಕ್ಷೇಪ ವ್ಯಕ್ತಪಡಿಸಿರುವುದು ಅಕ್ಷಮ್ಯ ಅಪರಾಧ. ಈ ರೀತಿಯ ಹೇಳಿಕೆಗಳನ್ನು ಕೋಡುವುದರಿಂದ ಅವರಿಗೆ ತಿಳಿ ಹೇಳುವ ಕೆಲಸ ಮಾಡುತ್ತೀವಿ, ನಾವು ಅವರನ್ನು ಸಂಪರ್ಕಿಸುವ ಯತ್ನ ಮಾಡಿದೆವು ಆದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ, ಇದೇ ರೀತಿಯ ವರ್ತನೆ ಮುಂದುವರೆದರೆ ಚಿತ್ರರಂಗದಿಂದ ಅಸಹಕಾರ ಕ್ರಮವನ್ನು ಕೈಗೊಳ್ಳುತ್ತೇವೆ  ಎಂದು ಎಚ್ಚರಿಕೆ ನೀಡಿದ್ದಾರೆ ಭಾ.ಮಾ.ಹರೀಶ್.

ಚೇತನ್ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಮ ಕೈಗೋಳ್ಳೊದು ಖಂಡಿತ. ಅಸಹಾಕಾರ ನೀಡುವ ತೀರ್ಮಾನಕ್ಕೆ ಮುಂದಾಗಲಿದ್ದೀವಿ. ಚಿತ್ರರಂಗದ ಯಾವುದೇ ಅಂಗ ಸಂಸ್ಥೆಗಳು ಅವರ ಸಿನಿಮಾಕ್ಕೆ ಕೆಲಸ ಮಾಡುವುದಿಲ್ಲ ಆದರೆ ಇದು ಈಗಲೇ ಅಲ್ಲ. ಇನ್ನೊಂದು ಸುತ್ತಿನ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದಾರೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್. ಅಂದಹಾಗೆ ನಟ ಚೇತನ್ ಸದ್ಯಕ್ಕೆ ಯಾವ ಚಿತ್ರಗಳಲ್ಲೂ ನಟಿಸುತ್ತಿಲ್ಲ.