ಡಾಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ಜೋಡಿ ಮತ್ತೊಮ್ಮೆ ಮೋಡಿ ಮಾಡಿದೆ. ಹೊಯ್ಸಳದಲ್ಲಿ ಡಾಲಿ ಮತ್ತು ಅಮೃತಾ ಅವರದ್ದು ಗಂಡ-ಹೆಂಡತಿ ಪಾತ್ರ. ಈ ಹಿಂದೆ ಪಾಪ್ ಕಾರ್ನ್ ಮಂಕಿ ಟೈಗರ್ ಹಾಗೂ ಬಡವ ರಾಸ್ಕಲ್ ಚಿತ್ರಗಳಿಗಿಂತಲೂ ಅದ್ಭುತವಾಗಿ ತೆರೆಯ ಮೇಲೆ ಬಂದಿದೆ ಜೋಡಿ. ಡಾಲಿ-ಅಮೃತಾರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ. ಪ್ರೇಕ್ಷಕರಷ್ಟೇ ಅಲ್ಲ, ಮೋಹಕತಾರೆ ರಮ್ಯಾ ಕೂಡಾ ಸಿನಿಮಾ ನೋಡಿ ಜೋಡಿಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.
ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಹೇಗಿದೆ? ನೀವೂ ಎಷ್ಟು ಮಾರ್ಕ್ಸ್ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಡಾಲಿ ಹಾಗೂ ಅಮೃತಾ ಇಬ್ಬರ ಆಫ್ ಲೈನ್ ಹಾಗೂ ಆನ್ ಲೈನ್ ಕೆಮಿಸ್ಟ್ರಿ ಸೂಪರ್ ಎಂದು ಹೇಳಿದ್ದಾರೆ. ‘ಗಂಡ-ಹೆಂಡತಿಯಾಗಿ ಧನಂಜಯ್ ಮತ್ತು ಅಮೃತಾ ಚೆನ್ನಾಗಿ ನಟಿಸಿದ್ದಾರೆ. ಇಬ್ಬರ ನಟನೆಗೂ 10ಕ್ಕೆ 10 ಮಾರ್ಕ್ಸ್ ನೀಡುತ್ತೇನೆ ಎಂದಿದ್ದಾರೆ.
ಹೊಯ್ಸಳ ಚಿತ್ರದ ಕಥೆ ಇಷ್ಟು. ನಾಪತ್ತೆಯಾಗಿರುವ ಪೊಲೀಸ್ ಅಧಿಕಾರಿಯ ಹುಡುಕಾಟಕ್ಕೆ ಖಡಕ್ ಅಧಿಕಾರಿ ಗುರುದೇವ್ ಬರುತ್ತಾನೆ. ಅಲ್ಲಿಂದ ಮುಂದೆ ಮರಳು ಮಾಫಿಯಾ, ಪೀತಿ, ಮರ್ಯಾದಾ ಹತ್ಯೆ..ಎಲ್ಲವೂ ಬರುತ್ತವೆ. ಈ ಎಲ್ಲವನ್ನೂ ಅದ್ಭುತವಾಗಿ ಬ್ಲೆಂಡ್ ಮಾಡಿ ಒಂದರೊಳಗೊಂದು ಹೆಣೆದಿರುವ ನಿರ್ದೇಶಕರ ಜಾಣ್ಮೆಗೆ ತಲೆಗೂಗಬೇಕು. ಹಾಗೆ ನೋಡಿದರೆ ಚಿತ್ರದ ನಾಯಕಿ ಅಮೃತಾ ಅಯ್ಯಂಗಾರ್ ಪಾತ್ರಕ್ಕೆ ಹೆಚ್ಚು ಸ್ಪೇಸ್ ಇಲ್ಲ. ಆದರೆ ಇರುವಷ್ಟು ಹೊತ್ತಿನಲ್ಲಿ ತೆರೆಯನ್ನು ಆವರಿಸಿಕೊಂಡು ಬಿಡುತ್ತಾರೆ ಅಮೃತಾ ಅಯ್ಯಂಗಾರ್. ಕಣ್ಣಲ್ಲೇ ಕೊಂದುಬಿಡುತ್ತಾರೆ.
ನಿರ್ದೇಶಕ ವಿಜಯ್ ಚೆಂದದ ಕಥೆಯನ್ನು ಸುಂದರವಾಗಿ ಅದ್ಧೂರಿಯಾಗಿ ಕಮರ್ಷಿಯಲ್ಲಾಗಿ ಹೇಳಿದ್ದಾರೆ. ಬಾಕ್ಸಾಫೀಸ್ ತುಂಬಿ ತುಳುಕುತ್ತಿದ್ದು, ನಿರ್ಮಾಪಕ ಯೋಗಿ ಬಿ.ರಾಜ್ ಫುಲ್ ಹ್ಯಾಪಿ.