ಉಪೇಂದ್ರ, ಶ್ರೇಯಾ ಸರಣ್ ಪ್ರಧಾನ ಪಾತ್ರದಲ್ಲಿದ್ದ ಕಬ್ಜ 3ನೇ ವಾರಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ಶಿವಣ್ಣ ಮತ್ತು ಸುದೀಪ್ ರೋಮಾಂಚನದ ನಡುವೆ 100 ಕೋಟಿ ಕ್ಲಬ್ ಸೇರಿದ್ದ ಕಬ್ಜ ಥಿಯೇಟರಿನಲ್ಲಿ ಈಗಲೂ ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ಕೆಲವರು ಉದ್ದೇಶಪೂರ್ವಕವಾಗಿಯೇ ನೆಗೆಟಿವ್ ಪ್ರಚಾರ ನಡೆಸುತ್ತಿದ್ದರೂ, ಆರ್.ಚಂದ್ರು ಅವರನ್ನು ಪರ್ಸನಲ್ ಅಟ್ಯಾಕ್ ಮಾಡುತ್ತಿದ್ದರೂ ಪ್ರೇಕ್ಷಕರು ಕಬ್ಜ ಚಿತ್ರವನ್ನು ಮೆಚ್ಚಿಕೊಂಡಿರುವುದೇ ಖುಷಿ ಕೊಡುವ ವಿಚಾರ. ಡೈರೆಕ್ಷನ್ ಅಷ್ಟೇ ಅಲ್ಲ, ಪ್ರೊಡ್ಯೂಸರ್ ಕೂಡಾ ಆಗಿದ್ದ ಆರ್.ಚಂದ್ರು ಗೆಲುವಿನ ನಗೆ ನಕ್ಕಿದ್ದಾರೆ. ಇದರ ಮಧ್ಯೆ ಕಬ್ಜ ಚಿತ್ರದ ಒಟಿಟಿ ರಿಲೀಸ್ ಡೇಟ್ ಕೂಡಾ ಫಿಕ್ಸ್ ಆಗಿದೆ.
ಕಬ್ಜ’ ಚಿತ್ರ ಏ.14ರಿಂದ ಅಮೆಜಾನ್ ಪ್ರೈಮ್ನಲ್ಲಿ ಪ್ರಸಾರವಾಗಲಿದೆ. ಮಾ.17ರಂದು 4000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕಬ್ಜ ಬಿಡುಗಡೆಯಾಗಿತ್ತು.
ಇತ್ತೀಚೆಗೆ ಚಿತ್ರ ಚೆನ್ನಾಗಿದೆ, ಪ್ರೇಕ್ಷಕರು ಬರುತ್ತಿದ್ದಾರೆ ಎಂಬ ವಿಷಯವನ್ನೂ ತಿರುಚಿ, ಸುಳ್ಳು ಸುಳ್ಳು ಸುದ್ದಿ ಸೃಷ್ಟಿಸಿದ್ದ ಎಫೆಕ್ಟ್, ಈ ಬಾರಿ ವಿತರಕರೇ ಬಂದು ಹೇಳುತ್ತಿದ್ದರೂ ಅನುಮಾನದ ಕಣ್ಣಿಂದ ನೋಡುವಂತಾಗಿದೆ. ಆದರೆ ಕಬ್ಜ ಭರ್ಜರಿ ಹಿಟ್ ಆಗಿದೆ ಎನ್ನುವುದಂತೂ ನಿಜ.