` ಪಡ್ಡೆಹುಲಿಯ ಹೊಸ ಕಥೆಗೆ ಅದ್ಧೂರಿ ಲವರ್ ಪ್ರಿಯಾಂಕ ಜೋಡಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪಡ್ಡೆಹುಲಿಯ ಹೊಸ ಕಥೆಗೆ ಅದ್ಧೂರಿ ಲವರ್ ಪ್ರಿಯಾಂಕ ಜೋಡಿ..!
Priyanka Kumar, Shreyas K Manju

ಪಡ್ಡೆಹುಲಿ, ವಿಷ್ಣುಪ್ರಿಯ, ರಾಣಾ ಚಿತ್ರಗಳ ಬಳಿಕ ಮತ್ತೊಂದು ಹೊಸ ಚಿತ್ರಕ್ಕೆ ರೆಡಿಯಾಗಿದ್ದಾರೆ ಶ್ರೇಯಸ್ ಮಂಜು. ಶ್ರೇಯಸ್ ಮಂಜು ಅವರ 4ನೇ ಸಿನಿಮಾಗೆ ಮಧುಗೌಡ ಡೈರೆಕ್ಟರ್. ನಿರ್ದೇಶಕರಾಗಿ ಮಧುಗೌಡ ಅವರಿಗೆ ಇದು ಮೊದಲ ಸಿನಿಮಾ. ಹಾಗಂತ ಚಿತ್ರರಂಗಕ್ಕೆ ಹೊಸಬರೇನಲ್ಲ. ಈಗಾಗಲೇ 10 ವರ್ಷಗಳಿಗೂ ಹೆಚ್ಚು ಕಾಲ ವಿವಿಧ ಚಿತ್ರಗಳು, ಸೀರಿಯಲ್ಲುಗಳಿಗೆ ಕೆಲಸ ಮಾಡಿದ ಅನುಭವ ಇದೆ. ಈ ಸಿನಿಮಾಗೆ ಹೀರೋಯಿನ್ ಪ್ರಿಯಾಂಕಾ ಕುಮಾರ್.

ಪ್ರಿಯಾಂಕ ಕುಮಾ ಈಗಾಗಲೇ ಅಭಿಷೇಕ್ ಅಂಬರೀಷ್ ಎದುರು ಬ್ಯಾಡ್ ಮ್ಯಾನರ್ಸ್ ಹಾಗೂ ವಿರಾಟ್ ಎದುರು ಅದ್ಧೂರಿ ಲವರ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ದುನಿಯಾ ಸೂರಿ ಹಾಗೂ ಎಪಿ ಅರ್ಜುನ್ ಡೈರೆಕ್ಷನ್ ಚಿತ್ರಗಳೆಂದರೆ, ನಾಯಕಿಯ ರೋಲ್`ಗಳು ಎಂದರೆ ಪ್ರಿಯಾಂಕಾ ಕುಮಾರ್ ಹೇಗೆ ನಟಸಿಬಹುದು ಎಂದು ಊಹೆ ಮಾಡಿಕೊಳ್ಳಬಹುದು. ಇದೊಂದು ಮಾಸ್ ಕಾಲೇಜ್ ಸ್ಟೋರಿ. ಶ್ರೇಯಸ್ ಕಾಲೇಜು ವಿದ್ಯಾರ್ಥಿಯಾಗಿ ನಟಿಸುತ್ತಿದ್ದಾರೆ. ಪ್ರಿಯಾಂಕಾ ಸಹ ಕಾಲೇಜು ವಿದ್ಯಾರ್ಥಿನಿ ಆಗಿರುತ್ತಾರೆ. ಬಬ್ಲಿ ಹುಡುಗಿಯಾಗಿರುವ ಅವರು ಸಿನಿಮಾ ತುಂಬಾ ಮಾತನಾಡುತ್ತಾ ಇರುತ್ತಾರೆ. ನೋಡುಗರಿಗೆ ನಮಗೂ ಇಂತಹ ಒಬ್ಬಳು ಸ್ನೇಹಿತೆ  ಇರಬೇಕು ಎಂದು ಫೀಲ್ ಆಗಬೇಕು ಅಂತಹ ರೋಲ್ ಪ್ರಿಯಾಂಕಾ ಅವರದ್ದು ಎನ್ನುತ್ತಾರೆ ಡೈರೆಕ್ಟರ್.

ಸಿನಿಮಾದಲ್ಲಿ ಯಾವ ಮೆಸೇಜ್ ಇಲ್ಲ. ಬುದ್ದಿವಾದವೂ ಇಲ್ಲ. ಓನ್ಲಿ ಎಂಟರ್‍ಟೈನ್‍ಮೆಂಟ್, ಅಷ್ಟೆ. ಆಕ್ಷನ್, ಸಾಂಗ್, ಕಾಮಿಡಿ, ಲವ್.. ಇರುವ ಎಂಟರ್‍ಟೈನರ್ ಸಿನಿಮಾ. ಶ್ರೇಯಸ್ ಮಂಜು ಮತ್ತು ಪ್ರಿಯಾಂಕಾ ಕುಮಾರ್ ನಾನು ಬರೆದ ಪಾತ್ರಕ್ಕೆ ಸೂಕ್ತವಾಗುತ್ತಾರೆ. ಇಬ್ಬರ ಪಾತ್ರಗಳು ಕೂಡ ಸಿಕ್ಕಾಪಟ್ಟೆ ಎಂಟರ್ಟೇನಿಂಗ್ ಆಗಿವೆ' ಎನ್ನುತ್ತಾರೆ ನಿರ್ದೇಶಕ ಮಧು ಗೌಡ. ಏಪ್ರಿಲ್‍ನಲ್ಲಿ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.