` ಹೀರೋ ಡಾಲಿ.. ವಿಲನ್ ಬಾಲಿ.. : ಹೊಯ್ಸಳನ ವಿಲನ್ ಸ್ಕೆಚ್ಚು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಹೀರೋ ಡಾಲಿ.. ವಿಲನ್ ಬಾಲಿ.. : ಹೊಯ್ಸಳನ ವಿಲನ್ ಸ್ಕೆಚ್ಚು
Hoysala Movie Image

ಗುರುದೇವ ಹೊಯ್ಸಳ ಚಿತ್ರ ಇದೇ 30ನೇ ತಾರೀಕು ತೆರೆಗೆ ಬರುತ್ತಿದೆ. ಡಾಲಿ ಧನಂಜಯ್ ಹೀರೋ. ಇದೇ ಮೊದಲ ಬಾರಿಗೆ ಡಾಲಿ ಚಿತ್ರಕ್ಕೆ ವಿದೇಶದಲ್ಲೂ ಅದ್ಭುತ ಮಾರ್ಕೆಟ್ ಸೃಷ್ಟಿಯಾಗಿದೆ. ಸಿಕ್ಕಾಪಟ್ಟೆ ಡಿಮ್ಯಾಂಡ್ ಬರುತ್ತಿದೆ. ಇದರ ನಡುವೆ ಹೊಯ್ಸಳ ಚಿತ್ರದ ಟ್ರೇಲರ್ ನೋಡಿದವರ ಗಮನ ಸೆಳೆಯುತ್ತಿರುವುದು ಚಿತ್ರದ ವಿಲನ್ ಪಾತ್ರಧಾರಿ ನವೀನ್ ಶಂಕರ್.

ಇದು ಸಾಮಾನ್ಯ ವಿಲನ್ ರೋಲ್ ಅಲ್ಲ. ಸಾಕಷ್ಟು ವಿಭಿನ್ನವಾಗಿದೆ. ನಿರ್ದೇಶಕ ವಿಜಯ್ ಅವರು ಕಥೆ ಹೇಳಿದ ಮೇಲೆ ಅವರು ಖಳನಾಯಕನ ಪಾತ್ರಕ್ಕಾಗಿಯೇ ಸ್ಪೆಷಲ್ ಸ್ಕೆಚ್ ಹಾಕಿದ್ದಾರೆ ಅನ್ನೋದು ಗೊತ್ತಾಯ್ತು. ನನಗೆ ಯಾವಾಗಲೂ ನಕಾರಾತ್ಮಕ ಪಾತ್ರಗಳಲ್ಲಿ ನಟಿಸಲು ಆಸಕ್ತಿ ಇತ್ತು. ಆದರೆ, ನನ್ನ ವೃತ್ತಿಜೀವನದಲ್ಲಿ ಇಷ್ಟು ಬೇಗ ಅದು ನನಸಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ ಎನ್ನುತ್ತಾರೆ ನವೀನ್ ಶಂಕರ್.

ಹೀರೋ ಆಗಿರೋದು ಡಾಲಿ ಧನಂಜಯ್. ಅವರ ಪಾತ್ರದ ತೀವ್ರತೆಗೆ ತಕ್ಕಂತೆ ನಟಿಸಬೇಕಿತ್ತು. ಧನಂಜಯ್ ಮತ್ತು ನನ್ನ ಮುಖಾಮುಖಿ ಹೇಗಿರಲಿದೆ. ಪ್ರೇಕ್ಷಕರ ರಿಯಾಕ್ಷನ್ ಹೇಗಿದೆ ಅನ್ನೋದನ್ನ ನೋಡೋಕೆ ಕಾಯುತ್ತಿದ್ದೇನೆ ಎನ್ನುತ್ತಾರೆ ನವೀನ್ ಶಂಕರ್.

ನವೀನ್ ಶಂಕರ್ ಒಳ್ಳೆಯ ನಟ ಎಂದು ಗೊತ್ತಾಗಿದ್ದು ಗುಳ್ಟು ಚಿತ್ರದ ಮೂಲಕ. ಇತ್ತೀಚೆಗೆ ಹೊಂದಿಸಿ ಬರೆಯಿರಿ, ಧರಣಿ ಮಂಡಲ ಮಧ್ಯದೊಳಗೆ ಚಿತ್ರಗಳ ಮೂಲಕ ವ್ಹಾಹ್ ಎನ್ನುವಂತೆ ಆಗಿರುವ ನವೀನ್ ಶಂಕರ್, ಗುರುದೇವ್ ಹೊಯ್ಸಳ ಚಿತ್ರದ ಪ್ರಮುಖ ವಿಲನ್. ಡಾಲಿಗೆ ಅಮೃತಾ ಅಯ್ಯಂಗಾರ್ ಮತ್ತೊಮ್ಮೆ ಜೋಡಿಯಾಗಿದ್ದು ಸಿನಿಮಾ ಇದೇ 30ರಂದು ರಿಲೀಸ್ ಆಗಲಿದೆ.