ಕೃಷ್ಣ-ಮಿಲನ ಮತ್ತೆ ಲವ್ ಮಾಕ್`ಟೇಲ್ : ಹೇಗಿದೆ ಪ್ರೇಕ್ಷಕರ ರಿಯಾಕ್ಷನ್ಸ್?
ಲವ್ ಮಾಕ್`ಟೇಲ್. ಡಾರ್ಲಿಂಗ್ ಕೃಷ್ಣ ಮೊದಲ ಬಾರಿಗೆ ನಿರ್ದೇಶನ ಮಾಡಿ, ನಿರ್ಮಾಪಕರೂ ಆಗಿದ್ದ ಸಿನಿಮಾ. ಅವರದ್ದೇ ಕಥೆ. ಅವರೇ ಹೀರೋ. ಕಥೆಯಲ್ಲೊಂದು ಫ್ರೆಶ್ ನೆಸ್ ಇತ್ತು. ಪ್ರೇಕ್ಷಕರ ಹೃದಯ ತಟ್ಟಿತು. ಸಿನಿಮಾ ಸೂಪರ್ ಹಿಟ್. ಆದಿ ಮತ್ತು ನಿಧಿಮಾ ಪಾತ್ರಗಳನ್ನು ಜನ ಇವತ್ತಿಗೂ ಮರೆತಿಲ್ಲ. ಮೊದಲ ವಾರ ಏನೇನೂ ಅಲ್ಲದೇ ಇದ್ದ ಲವ್ ಮಾಕ್`ಟೇಲ್, 2ನೇ ವಾರಕ್ಕೆ ಬರುವ ಹೊತ್ತಿಗೆ ಸೂಪರ್ ಹಿಟ್ ಲಿಸ್ಟಿಗೆ ಸೇರಿತ್ತು.
ಅದರ ಬೆನ್ನ ಹಿಂದೆಯೇ ಲವ್ ಮಾಕ್`ಟೇಲ್ 2 ಬಂತು. ಅದೂ ಭರ್ಜರಿ ಭರ್ಜರಿ ಹಿಟ್. ಈಗ ಲವ್ ಮಾಕ್`ಟೇಲ್ 3 ಬರುತ್ತಿದೆ. ಯುಗಾದಿ ದಿನ ಕೃಷ್ಣ ಮತ್ತು ಮಿಲನ ಇಬ್ಬರೂ ಲವ್ ಮಾಕ್`ಟೇಲ್ 3 ಚಿತ್ರವನ್ನ ಘೋಷಿಸಿದ್ದಾರೆ. ಇನ್ನೊಂದು 3 ತಿಂಗಳು. ಸ್ಕ್ರಿಪ್ಟ್ ಕೆಲಸ ಮುಗಿಸುತ್ತೇವೆ. ಸಿನಿಮಾ ಸೆಟ್ಟೇರುತ್ತದೆ. ಈ ಚಿತ್ರದ ಕಥೆಯಲ್ಲಿ ಮಿಲನ ಕೂಡಾ ತೊಡಗಿಸಿಕೊಂಡಿದ್ದಾರೆ ಎಂದಿದ್ದಾರೆ ಕೃಷ್ಣ.
ಆದರೆ ಪ್ರೇಕ್ಷಕರ ಪ್ರತಿಕ್ರಿಯೆ ಮಾತ್ರ ವಿಚಿತ್ರವಾಗಿದೆ. ಕೆಲವರು ಸೇಫ್ ಬೆಟ್ ಅನ್ನೋ ಕಾರಣಕ್ಕೆ ಮತ್ತೆ ಮತ್ತೆ ಅದೇ ಕಥೆ ಹೇಳಬೇಡಿ. ಹೊಸ ಕಥೆ ಹೇಳಿ. ಲವ್ ಮಾಕ್`ಟೇಲ್ 2ನೇ ಕಷ್ಟವಾಗಿತ್ತು. ಲವ್ ಮಾಕ್`ಟೇಲ್ ಇದ್ದಂತೆ ಇರಲಿಲ್ಲ. ಹೊಸ ಕಥೆ ಕೇಳಿ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಮತ್ತೊಂದು ಲವ್ ಸ್ಟೋರಿ ಬರಲಿದೆ ಎಂದು ಖುಷಿಯಾಗಿದ್ದಾರೆ.