ಪೆಂಟಗನ್. ಅಪರೂಪಕ್ಕೆ ಆಗುವ ಪ್ರಯೋಗ. ಆದರೆ ಗುರು ದೇಶಪಾಂಡೆ ಪ್ರಯೋಗವನ್ನು ಕಮರ್ಷಿಯಲ್ಲಾಗಿಯೇ ಮಾಡಿದ್ದಾರೆ. ಐವರು ನಿರ್ದೇಶಕರು.. ಐದು ಕಥೆ.. ಆದರೆ ಈ ಎಲ್ಲ ಐದು ಕಥೆಗಳೂ ಒಂದೆಡೆ ಸೇರುತ್ತವಾ..? ಎಲ್ಲ ಐದು ಕಥೆಗಳಿಗೂ ಒಂದು ಕಾಮನ್ ಲಿಂಕ್ ಇದೆಯಾ..? ಹೀಗೊಂದು ಕುತೂಹಲ ಹುಟ್ಟಿಸುತ್ತದೆ ಟ್ರೇಲರ್. ತಾರಾಗಣವಂತೂ ಭರ್ಜರಿ..
ರವಿಶಂಕರ್, ಕಿಶೋರ್, ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ.. ಹೀಗೆ ದೊಡ್ಡ ದೊಡ್ಡ ಕಲಾವಿದರೇ ಇದ್ದಾರೆ. ಶಿವಾಜಿ ಸುರತ್ಕಲ್' ಸಿನಿಮಾ ನಿರ್ದೇಶಿಸಿರೋ ಆಕಾಶ್ಶ್ರೀವತ್ಸ, 'ಚೂರಿಕಟ್ಟೆ' ಸಿನಿಮಾದ ನಿರ್ದೇಶಕ ರಾಘು ಶಿವಮೊಗ್ಗ, 'ಬ್ರಹ್ಮಚಾರಿ' ನಿರ್ದೇಶಕ ಚಂದ್ರಮೋಹನ್, ಹೊಸ ಪ್ರತಿಭೆ ಕಿರಣ್ ಕುಮಾರ್ಹಾಗೂ ಗುರುದೇಶಪಾಂಡೆ ಒಂದೊಂದು ಕಥೆಗೆ ಆಕ್ಷನ್ ಕಟ್ ಹೇಳಿದ್ದಾರೆ. ರಾಜಹುಲಿ' ಖ್ಯಾತಿಯ ಗುರು ದೇಶಪಾಂಡೆ 'ಪೆಂಟಗನ್' ಸಿನಿಮಾಗೆ ನಿರ್ದೇಶಕ, ನಿರ್ಮಾಪಕ ಕಮ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ.
ಈ ಹಿಂದೆ ಕಥಾಸಂಗಮ ಮೂಲಕ ರಿಷಬ್ ಶೆಟ್ಟಿ ಈ ರೀತಿಯ ಪ್ರಯೋಗ ಮಾಡಿದ್ದರು. ಹೀಗಾಗಿಯೇ ರಿಷಬ್ ಶೆಟ್ಟಿ ಚಿತ್ರಕ್ಕೆ ಶುಭಕೋರಿದ್ದಾರೆ. ಏಪ್ರಿಲ್ 7ರಂದು ಪೆಂಟಗನ್ ರಿಲೀಸ್ ಆಗುತ್ತಿದೆ. ಸ್ಟಾರ್ ನಟರ ಜೊತೆ ಜೊತೆಯಲ್ಲಿಯೇ ತನಿಶಾ, ಪ್ರೇರಣಾ ಕಂಬಂ, ಪ್ರೀತಿಕಾ ದೇಶಪಾಂಡೆ, ರವಿ ನಾಯಕ್, ಶ್ರುತಿ ನಾಯಕ್, ವಂಶಿ ಕೃಷ್ಣ ಸೇರಿದಂತೆ ದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಅಭಿಲಾಷ್ ಕಲ್ಲತ್ತಿ, ಗುರುಪ್ರಸಾದ್ ಎಮ್.ಜಿ. ಹಾಗೂ ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಕನ್ನಡದಲ್ಲಿ ಈ ರೀತಿಯ ಪ್ರಯೋಗಗಳು ವಿರಳ. ಆ ಕಾರಣಕ್ಕಾಗಿ ‘ಪೆಂಟಗನ್’ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ. ಟ್ರೇಲರ್ ನೋಡಿದ ಬಳಿಕ ಸಿನಿಪ್ರಿಯರ ನಿರೀಕ್ಷೆ ಡಬಲ್ ಆಗಿದೆ.