ನಟಿ ಮೀನಾ. ಹಿರಿಯ ನಟಿ. ಸ್ಟಾರ್ ನಟಿಯೂ ಹೌದು. ವಯಸ್ಸು 46 ವರ್ಷ. ಮದುವೆಯಾಗಿತ್ತು. ಪತಿ ವಿದ್ಯಾಸಾಗರ್ ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ನಟ ಧನುಷ್. ಹಿರಿಯ ನಟ ಹಾಗೂ ಸ್ಟಾರ್ ನಟ. ವಯಸ್ಸು 40. ಮೀನಾಗಿಂತಲೂ ಚಿಕ್ಕ ವಯಸ್ಸು. ಇವರಿಗೂ ಮದುವೆಯಾಗಿತ್ತು. ಐಶ್ವರ್ಯಾ ರಜನಿಕಾಂತ್ ಜೊತೆ ಮದುವೆಯಾಗಿದ್ದರಾದರೂ ಈಗ ಸಪರೇಟ್ ಆಗಿದ್ದಾರೆ.
ಈಗ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿರುವುದು ತಮಿಳು ಚಿತ್ರರಂಗದಿಂದಲೆ. ಬೈಲ್ವಾನ್ ರಂಗನಾಥನ್ ಎಂಬ ನಟ ಇವರಿಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿಬಿಟ್ಟಿದ್ದಾನೆ.
ನಟಿ ಮೀನಾ ಹಾಗೂ ಧನುಷ್ ಮದುವೆಯಾಗಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ವರ್ಷದ ಜುಲೈ ತಿಂಗಳಿನಲ್ಲಿ ಧನುಷ್ - ಮೀನಾ ಮದುವೆ ನಡೆಯಲಿದೆ. ಅದು ವರ್ಕೌಟ್ ಆಗಲಿಲ್ಲ ಅಂದ್ರೆ ಇಬ್ಬರೂ ಲಿವ್ ಇನ್ ರಿಲೇಶನ್ಶಿಪ್ನಲ್ಲಿರಲಿದ್ದಾರೆ ಎನ್ನುವುದು ಈತನ ಮಾತು. ಆ ಮಾತಿಗೇನಾದರೂ ಪ್ರೂಫ್ ಇದೆಯಾ..? ಇಲ್ಲ. ದಾಖಲೆ ಇದೆಯಾ? ಇಲ್ಲ. ಫೋಟೋ..ವಿಡಿಯೋ.. ಏನಾದರೂ ಇದೆಯಾ..? ಇಲ್ಲ. ಧನುಷ್ ಮತ್ತು ಮೀನಾ ಮಧ್ಯೆ ಫ್ರೆಂಡ್‍ಶಿಫ್ ಇದೆಯಾ ಎಂದು ನೋಡಿದರೆ ಅದೂ ಇಲ್ಲ. ಚಿತ್ರರಂಗದ ಕಲಾವಿದರು ಎಂಬ ವಿಷಯದ ಹೊರತಾಗಿ ಆತ್ಮೀಯತೆಯೂ ಇಲ್ಲ. ಪರಿಚಯ ಇದೆ ಅಷ್ಟೆ.
ಬೈಲ್ವಾನ್ ರಂಗನಾಥನ್ ಇಷ್ಟಕ್ಕೇ ಸುಮ್ಮನಾಗಿಲ್ಲ. ರಜನಿಕಾಂತ್ ಮಗಳು ಐಶ್ವರ್ಯಾ, ಪ್ರಭುದೇವ ಜೊತೆ ಮದುವೆಯಾಗ್ತಾರೆ. ಅಥವಾ ಆಗದಿದ್ದರೆ ಅವರಿಬ್ಬರೂ ಲಿವ್ ಇನ್ ರಿಲೇಷನ್`ಶಿಪ್‍ನಲ್ಲಿರುತ್ತಾರೆ ಎಂದಿದ್ದಾರೆ. ಅದಕ್ಕೂ ಅಷ್ಟೆ..ದಾಖಲೆಗಳಿಲ್ಲ. ಪುರಾವೆಗಳಿಲ್ಲ. ಒಟ್ಟಿನಲ್ಲಿ ಬೈಲ್ವಾನ್ ರಂಗನಾಥನ್ ಈ ಹೇಳಿಕೆ ನೀಡಿದ್ದ ಕಾರಣಕ್ಕೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.