ಗುರುದೇವ್ ಹೊಯ್ಸಳ. ಡಾಲಿ ಧನಂಜಯ ಅಭಿನಯದ 25ನೇ ಸಿನಿಮಾ. ಇದೇ 30ರಂದು ರಿಲೀಸ್ ಆಗಲಿರೋ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಡಾಲಿ ಪೊಲೀಸ್ ಆಫೀಸರ್ ಗುರುದೇವ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅಲ್ಲೊಂದು ಪೊಲಿಟಿಕಲ್ ಗೇಮ್ ಇದೆ. ಪೊಲೀಸ್ ಆಫೀಸರ್ ಒಬ್ಬನ ಆಕ್ರೋಶವಿದೆ. ಮಧ್ಯದಲ್ಲೊಂದು ಲವ್ ಸ್ಟೋರಿಯೂ ಇರುವ ಸೂಚನೆಯಿದೆ. ನಾಯಕಿಯಾಗಿರುವುದು ಅಮೃತಾ ಅಯ್ಯಂಗಾರ್. ಬೆಳಗಾವಿ ಕಡೆಯ ಭಾಷೆಯ ಸೊಗಡು ಅಚ್ಚೊತ್ತಿದಂತಿದೆ. ಖಡಕ್ ಧ್ವನಿ.. ಖಡಕ್ ಸಂಭಾಷಣೆ.. ಡಾಲಿ ಹೇಳುವ ಖಡಕ್ ಸಂಭಾಷಣೆಗಳು ಅವರ ಅವರ ಪಾತ್ರ ಎಷ್ಟು ರಗಡ್ ಆಗಿರಬಹುದೆಂಬ ಅಂದಾಜು ನೀಡುತ್ತಿದೆ. ಡಾಲಿಗೆ ಎದುರಾಗಿ ಅಷ್ಟೆ ಒರಾಟದ ಆದರೆ ಮೃಗೀಯ ವಿಲನ್ ಸಹ ಇದ್ದಾನೆ. ಇವರಿಬ್ಬರ ಸೆಣೆಸಾಟ ಹೇಗಿರಬಹುದೆಂಬ ಕುತೂಹಲ ಹುಟ್ಟಿಸುವಂತಿದೆ.
ಟೀಸರ್ನಲ್ಲಿದ್ದ ಕನ್ನಡ ಧ್ವಜ, ಸಂಗೊಳ್ಳಿ ರಾಯಣ್ಣ ಪ್ರತಿಮೆಗಳು ಟ್ರೈಲರ್ನಲ್ಲಿಯೂ ಇವೆ. ಟ್ರೈಲರ್ನಲ್ಲಿ ನಾಯಕ ಹಾಗೂ ವಿಲನ್ಗಳ ಹೊರತಾಗಿ ಬೇರೆ ಪಾತ್ರಗಳಿಗೆ ಪ್ರಾಮುಖ್ಯತೆ ಕಡಿಮೆ. ಅದರಲ್ಲಿಯೂ ನಾಯಕಿ ಅಮೃತಾ ಅಯ್ಯಂಗಾರ್ ಕಂಡ ಕೂಡಲೇ ಮರೆಯಾಗಿಬಿಡುತ್ತಾರೆ.
ಖಡಕ್ ಆದ ಒರಟು ವ್ಯಕ್ತಿತ್ವದ ನಾಯಕನಿಗೆ ಪಕ್ಕಾ ಠಕ್ಕರ್ ಕೊಡುವ ವಿಲನ್ ಪಾತ್ರವನ್ನೇ ಸೃಷ್ಟಿಸಿದ್ದಾರೆ ನಿರ್ದೇಶಕ ವಿಜಯ್ ಎನ್. ವಿಲನ್ ಪಾತ್ರವನ್ನು ನಟ ನವೀನ್ ಶಂಕರ್ ನಿರ್ವಹಿಸಿದ್ದಾರೆ.
ಸಿನಿಮಾ ನಿರ್ಮಾಣ ಮಾಡಿರುವುದು ಕಾರ್ತಿಕ್ ಗೌಡ ಹಾಗೂ ಯೋಗಿ. ಕೆಆರ್ಜಿ ಸ್ಟುಡಿಯೋಸ್ ಮೂಲಕ ಸಿನಿಮಾ ನಿರ್ಮಾಣವಾಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಂಭಾಷಣೆ ಬರೆದಿರುವುದು ಮಾಸ್ತಿ. ಸಿನಿಮಾ ಇದೇ ತಿಂಗಳು 30ರಂದು ತೆರೆಗೆ ಬರಲಿದೆ.