ಗಲ್ಲಾಪೆಟ್ಟಿಗೆಯಲ್ಲಿ ‘ಕಬ್ಜ’ ಸಿನಿಮಾ ಧೂಳೆಬ್ಬಿಸುತ್ತಿದೆ. 2ನೇ ದಿನಕ್ಕೆ ಈ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಆ ಮೂಲಕ ದೊಡ್ಡ ಯಶಸ್ಸು ಕಂಡಿದೆ. ಮೊದಲ ದಿನ (ಮಾರ್ಚ್ 17) ಭರ್ಜರಿ ಓಪನಿಂಗ್ ಪಡೆದುಕೊಂಡ ಈ ಸಿನಿಮಾ 2ನೇ ದಿನವೂ ಅಬ್ಬರಿಸಿದೆ. ಆ ಮೂಲಕ ನಿರ್ಮಾಪಕರಿಗೆ ಭಾರಿ ಲಾಭ ಮಾಡಿಕೊಟ್ಟಿದೆ. ‘ಕಬ್ಜ’ ಸಿನಿಮಾದ 2ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ರಿಪೋರ್ಟ್ ಲಭ್ಯವಾಗಿದೆ. ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಈ ಸಿನಿಮಾ ಜಯಭೇರಿ ಬಾರಿಸಿದೆ. ಮೊದಲ ದಿನ ಬರೋಬ್ಬರಿ 54 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. ಎರಡೇ ದಿನದ ಕಲೆಕ್ಷನ್ ಸೇರಿ ಒಟ್ಟು 100 ಕೋಟಿ ರೂಪಾಯಿ ಆಗಿದೆ.
ಥಿಯೇಟರ್ ಮಾಲೀಕರು ಮುಂಚೆ ಹಣ ಕೊಟ್ಟು ಸಿನಿಮಾ ತೆಗೆದುಕೊಂಡು ಹೋಗಿದ್ದಾರೆ. ಇನ್ನು, ಟಿವಿ ಹಾಗೂ ಒಟಿಟಿಯವರಿಗೆ ಮೊದಲೇ ಸಿನಿಮಾ ತೋರಿಸಿ ಇದು ನನ್ನ ಚಿತ್ರ ಎಂದಿದ್ದೆ. ಅವರು ಒಳ್ಳೆಯ ಬೆಲೆಕೊಟ್ಟು ಸಿನಿಮಾ ಖರೀದಿ ಮಾಡಿದ್ದಾರೆ. ನಾನು ಹಾಕಿರುವ ಹಣಕ್ಕೆ ಅವತ್ತೇ ಗೆದ್ದೆ. ಹೂಡಿಕೆ ಮಾಡಿರುವ ಹಣ ಬಂದಿದೆ ಎಂದಿದ್ದಾರೆ ನಿರ್ದೇಶಕ ಆರ್. ಚಂದ್ರು.
‘ಕಬ್ಜ’ ಯಶಸ್ಸು ಕನ್ನಡ ಚಿತ್ರರಂಗಕ್ಕೆ ದೊಡ್ಡ ಬೂಸ್ಟ್ ನೀಡಿದೆ. ಸಿನಿಮಾದ ಮೇಕಿಂಗ್, ಬಿಜಿಎಂ, ಮಲ್ಟಿ ಸ್ಟಾರ್ ಸಿನಿಮಾ.. ಹೀಗೆ ಚಿತ್ರದ ಎಲ್ಲ ಅಂಶಗಳೂ ಕಬ್ಜಕ್ಕೆ ಪಾಸಿಟಿವ್ ಇಂಪ್ಯಾಕ್ಟ್ ಮಾಡಿವೆ.
ಕರ್ನಾಟಕವೊಂದರಲ್ಲೇ ಈ ಚಿತ್ರ 20 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ಭಾಷೆಯಿಂದ ಚಿತ್ರಕ್ಕೆ 12 ಕೋಟಿ ರೂಪಾಯಿ ಹರಿದು ಬಂದಿದೆ. ತೆಲುಗು ಭಾಷೆಯಿಂದ 7 ಕೋಟಿ ರೂಪಾಯಿ, ತಮಿಳಿನಿಂದ 5 ಕೋಟಿ ರೂಪಾಯಿ, ಮಲಯಾಳಂನಿಂದ 3 ಕೋಟಿ ರೂಪಾಯಿ ಹಾಗೂ ವಿದೇಶದಿಂದ 8 ಕೋಟಿ ರೂಪಾಯಿ ಗಳಿಕೆ ಆಗಿದೆ. ಇದು ಮೊದಲ ದಿನದ ಕಂಪ್ಲೀಟ್ ಡೀಟೈಲ್ಸ್ ಮಾತ್ರ. ಬುಧವಾರ ಯುಗಾದಿ ಹಬ್ಬ ಇದ್ದು, ಆ ಪ್ರಯುಕ್ತ ಸರ್ಕಾರಿ ರಜೆ ಇದೆ. ಅದು ಕೂಡ ಚಿತ್ರಕ್ಕೆ ವರದಾನವಾಗಿದೆ. ಕನ್ನಡದಲ್ಲಿ ಯಾವುದೇ ದೊಡ್ಡ ಬಜೆಟ್ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ಇದು ಕೂಡ ಚಿತ್ರಕ್ಕೆ ಸಹಕಾರಿ ಆಗಿದೆ.