ಉಪೇಂದ್ರ, ಶಿವರಾಜ್ ಕುಮಾರ್, ಸುದೀಪ್, ಶ್ರೇಯಾ.. ಮುರಳಿ ಕೃಷ್ಣ, ಪೋಸಾನಿ ಕೃಷ್ಣ ಮುರಳಿ, ಅನೂಪ್ ರೇವಣ್ಣ, ಕಬೀರ್ ದುಲ್ಹಾನ್ ಸಿಂಗ್, ದೇವ್‍ಗಿಲ್, ಕಾಮರಾಜನ್, ನವಾಬ್ ಷಾ, ಜಾನ್ ಕೊಕೆನ್, ಡ್ಯಾನಿಷ್ ಅಖ್ತರ್.. ಹೀಗೆ.. ಚಿತ್ರದ ಪ್ರತಿ ಪಾತ್ರಗಳಲ್ಲೂ ಸ್ಟಾರ್ ನಟರೇ ಇದ್ದಾರೆ. ನಿರ್ದೇಶಕ ಆರ್.ಚಂದ್ರು ಕಬ್ಜ ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ದೊಡ್ಡದಾಗಿರುತ್ತೆ ಎನ್ನುವವರಿಗೆಲ್ಲ ಕಬ್ಜ ಬೇರೆಯದೇ ಉತ್ತರ ಕೊಟ್ಟಿದೆ.
ಆರ್. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಇತ್ತೀಚೆಗೆ ಸೆನ್ಸಾರ್ ಆಗಿದೆ. ಈ ಸೆನ್ಸಾರ್ ಸರ್ಟಿಫಿಕೇಟ್ ಪ್ರಕಾರ, 'ಕಬ್ಜ' ಸಿನಿಮಾದ ಉದ್ದ ಸುಮಾರು 136 ನಿಮಿಷ. ಅಂದರೆ, ಇಡೀ ಸಿನಿಮಾ 2 ಗಂಟೆ 16 ನಿಮಿಷದಲ್ಲಿ ಮುಗಿದು ಹೋಗುತ್ತೆ. ಪ್ಯಾನ್ ಇಂಡಿಯಾ ಸಿನಿಮಾಗಳ ರನ್ಟೈಮ್ ಸಹಜವಾಗಿ 150 ರಿಂದ 170 ನಿಮಿಷ ಇರಬೇಕು ಅನ್ನೋ ವಾದವಿದೆ.
ಹೀಗಾಗಿ ಸ್ಕ್ರೀನ್ ಪ್ಲೇ ಚುರುಕಾಗಿರುತ್ತೆ. ಕಥೆ ಚಿರತೆಯಂತೆ ಓಡುತ್ತೆ. ಚಕಚಕನೆ ಸರಿದು ಹೋಗುತ್ತೆ ಎನ್ನುವ ನಿರೀಕ್ಷೆ ಇದೆ. ಇದೆಲ್ಲದರ ನಡುವೆ ಉಪೇಂದ್ರ ಕಬ್ಜ 2 ಕೂಡಾ ಬರಲಿದೆ ಎಂಬ ಸುಳಿವು ನೀಡಿದ್ದಾರೆ. ಬಂದರೂ ಬರಬಹುದು. ಟಿಕೆಟ್ ಬುಕ್ಕಿಂಗ್ ಅಂತೂ ಭರ್ಜರಿಯಾಗಿ ನಡೆಯುತ್ತಿದೆ.