ಕಬ್ಜ. ಈ ವರ್ಷದ ಬಹುನಿರೀಕ್ಷಿತ ಚಿತ್ರ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅಭಿನಯದ ಕಬ್ಜ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ರವಿ ಬಸ್ರೂರು ಸಂಗೀತ ಮತ್ತು ಸಾಹಿತ್ಯದಲ್ಲಿ ಧಮ್ ಇದೆ. ಕಬ್ಜ.. ಹೇ ಕಬ್ಜ.. ದುನಿಯಾನೇ ಮಾಡ್ಕೋ ಕಬ್ಜ.. ಎಂದು ಶುರುವಾಗುವ ಹಾಡು, ಚಿತ್ರದ ಹೀರೋ ಭೂಗತಲೋಕವನ್ನು ಆಳುವುದಕ್ಕೆ ಹೊರಟಾಗ ಬರುವ ಗೀತೆ ಇರಬೇಕು.
ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಮಗ ಭೂಗತ ದೊರೆಯಾಗುವ ಕಥೆ ಚಿತ್ರದಲ್ಲಿದೆ. ಉಪೇಂದ್ರ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ಪೊಲೀಸ್ ಆಫೀಸ್ ಪಾತ್ರದಲ್ಲಿ ಕಿಚ್ಚನ ಕರಾಮತ್ತಿದೆ. ಶ್ರೇಯಾ ಸರಣ್ ನಾಯಕಿ. ಆರ್.ಚಂದ್ರ, ಕಥೆ, ಚಿತ್ರಕಥೆ, ನಿರ್ದೇಶನದ ಜೊತೆ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ಕಬ್ಜ ಇದೇ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ದಿನ ಬಿಡುಗಡೆಯಾಗುತ್ತಿದೆ. ಟೈಟಲ್ ಟ್ರ್ಯಾಕ್ ಹಾಡಿರುವುದು ಒಬ್ಬರಲ್ಲ. ಇದು ಗ್ರೂಪ್ ಸಾಂಗ್. ಹಲವರು ಹೇಳುವ ರೀತಿ ಇರುವ ಗ್ರೂಪ್ ಸಾಂಗಿನಲ್ಲಿ ಬಸ್ರೂರು ಗ್ಯಾಂಗ್ ಇದೆ ಎನ್ನುವುದು ವಿಶೇಷ.
ಸಂಗೀತ, ಸಾಹಿತ್ಯವಷ್ಟೇ ಅಲ್ಲ, ಹಾಡಿನಲ್ಲೂ ಬಸ್ರೂರು ಇದ್ದಾರೆ. ರವಿ ಬಸ್ರೂರು, ವಿಜಯ್ ಬಸ್ರೂರು, ಕೃಷ್ಣ ಬಸ್ರೂರು, ಕೃಷ್ಣಮೂರ್ತಿ ಬಸ್ರೂರು, ರಾಮಕೃಷ್ಣ ಬಸ್ರೂರು, ಭಾರ್ಗವ್ ಬಸ್ರೂರು, ಪೂರ್ಣಚಂದ್ರ ಬಸ್ರೂರು, ನಿಖ್ಲಿ ಬಸ್ರೂರು... ಹೀಗೆ ಬಸ್ರೂರು ಗ್ಯಾಂಗ್ ಜೊತೆ ಚೇತನ್ ಹಂದಟ್ಟು, ನಾಗಪ್ರಕಾಶ್ ಕೋಟಾ, ಉಮೇಶ್ ಕಾರ್ಕಡ, ನಂದು ಜೆಕೆಎಲ್‍ಎಫ್, ಡಿಜೆ ರಾಜು ಕೂಡಾ ಹಾಡಿದ್ದಾರೆ. ಅವರೆಲ್ಲರ ಟೋಟಲ್ ಸಾಂಗ್ ಕಬ್ಜ ಟ್ರ್ಯಾಕ್.