` ನಯನತಾರಾಗೂ ಕಾಡಿತ್ತು ಕಾಸ್ಟಿಂಗ್ ಕೌಚ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಯನತಾರಾಗೂ ಕಾಡಿತ್ತು ಕಾಸ್ಟಿಂಗ್ ಕೌಚ್
Nayanathara Image

ನಯನತಾರಾ. ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್. ಸ್ಟಾರ್ ನಟರೊಬ್ಬರ ಚಿತ್ರಗಳಿಗೆ ಪ್ರೇಕ್ಷಕರು ಮುಗಿಬೀಳುವಂತೆಯೇ ನಯನತಾರಾ ಚಿತ್ರಗಳಿಗೆ ಪ್ರೇಕ್ಷಕರಿದ್ದಾರೆ. ನಯನತಾರಾ ಚಿತ್ರಗಳು ಕೇವಲ ಆಕೆಯ ಹೆಸರಿನಲ್ಲಿಯೇ ಕೋಟಿ ಕೋಟಿ ಬ್ಯುಸಿನೆಸ್ ಮಾಡುತ್ತವೆ. ಇತ್ತೀಚೆಗೆ ಆಕೆ ನಟಿಸಿದ ಬಹುತೇಕ ಚಿತ್ರಗಳು ಆಕೆಯ ಪಾತ್ರದ ಸುತ್ತಲೇ ಇರುವಂತಹವು. ರಜನಿ, ವಿಜಯ್, ಚಿರಂಜೀವಿ.. ಸೇರಿದಂತೆ ಕೆಲವೇ ಕೆಲವು ಸ್ಟಾರ್ ನಟರ ಚಿತ್ರಗಳಲ್ಲಿ ಅಭಿನಯಿಸಿದ್ದರೂ ಉಳಿದಂತೆ ಬಹುತೇಕ ಚಿತ್ರಗಳಲ್ಲಿ ಆಕೆಯೇ ಹೀರೋ & ಹೀರೋಯಿನ್. ಅಂತಹ ನಟಿಗೂ ಕಾಸ್ಟಿಂಗ್ ಕೌಚ್ ಕಾಡಿತ್ತು ಎನ್ನುವ ಅಚ್ಚರಿಯ ಸಂಗತಿಯನ್ನು ಸ್ವತಃ ನಯನತಾರಾ ಬಹಿರಂಗಪಡಿಸಿದ್ದಾರೆ.

ಸಿನಿಮಾ ರಂಗಕ್ಕೆ ಬಂದಾಗ ನನ್ನನ್ನೂ ಕೂಡ ಕಮಿಟ್‍ಮೆಂಟ್‍ಗೆ ಕೇಳಿದರು. ಆದರೆ, ನಾನು ಅದಕ್ಕೆ ಒಪ್ಪಲು ಸಿದ್ಧಳಿರಲಿಲ್ಲ. ನನಗೆ ನನ್ನ ಟ್ಯಾಲೆಂಟ್ ಮೇಲೆ ನಂಬಿಕೆಯಿತ್ತು. ನಾವು ಹೇಗೆ ಇರುತ್ತೆವೆಯೋ, ನಮ್ಮನ್ನು ಇಂಡಸ್ಟ್ರಿ ಹಾಗೆ ನಡೆಸಿಕೊಳ್ಳುತ್ತದೆ ಎಂದು ಹೇಳುವ ಮೂಲಕ ಕಾಸ್ಟಿಂಗ್ ಕೌಚ್ ಅನುಭವವನ್ನು ಅವರು ಬಿಚ್ಚಿಟ್ಟಿದ್ದಾರೆ.

ಒಂದು ಫೇವರ್ ಮಾಡಿಕೊಡು, ನಿನಗೆ ಪ್ರಮುಖವಾದ ರೋಲ್ ಕೊಡುತ್ತೇನೆ ಎನ್ನುತ್ತಿದ್ದರಂತೆ. ಅದನ್ನೆಲ್ಲ ರಿಜೆಕ್ಟ್ ಮಾಡಿ ಒಳ್ಳೆಯ ಪಾತ್ರಗಳಿಗಷ್ಟೇ ಎಸ್ ಎಂದೆ. ನೋ ಎನ್ನುವುದಕ್ಕೂ ಧೈರ್ಯ ಬೇಕು ಎಂದಿದ್ದಾರೆ ನಯನತಾರಾ. ನಯನತಾರಾ ಸದ್ಯಕ್ಕೆ ಶಾರೂಕ್ ಖಾನ್ ಜೊತೆ ಜವಾನ್ ಸೇರಿದಂತೆ ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ತಮ್ಮದೇ ಪ್ರೊಡಕ್ಷನ್ಸ್‍ನಲ್ಲಿ 75ನೇ ಸಿನಿಮಾ ಮಾಡುತ್ತಿದ್ದಾರೆ. ನಟಿಯೊಬ್ಬರು 75 ಸಿನಿಮಾ ಮಾಡುವುದು ಸುಲಭದ ಮಾತಲ್ಲ.