` ಘೋಸ್ಟ್`ಗೆ ಅರ್ಚನಾ ಜೋಯಿಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಘೋಸ್ಟ್`ಗೆ ಅರ್ಚನಾ ಜೋಯಿಸ್
Archana Jois image

ಶಿವಣ್ಣ-ಶ್ರೀನಿ ಕಾಂಬಿನೇಷನ್ನಿನ ಘೋಸ್ಟ್ ಚಿತ್ರಕ್ಕೆ ಈಗಾಗಲೇ ಅನುಪಮ್ ಖೇರ್, ಜಯರಾಮ್ ನಟಿಸುತ್ತಿದ್ದು, ಚಿತ್ರದ ಕ್ರೇಜ್ ಹೆಚ್ಚುತ್ತಿದೆ. ವಿಭಿನ್ನವಾದ ಪೋಸ್ಟರ್, ಪ್ರೆಸೆಂಟೇಷನ್ ಮೂಲಕ ಶ್ರೀನಿ ಚಿತ್ರದ ಕ್ರೇಜ್ ಹೆಚ್ಚಿಸುತ್ತಿದ್ದಾರೆ. ಶ್ರೀನಿಯವರ ಹಿಂದಿನ ಬೀರ್`ಬಲ್, ಓಲ್ಡ್ ಮಾಂಕ್ ಚಿತ್ರಗಳಿಗಿಂತ ಬೇರೆಯದೇ ರೀತಿಯಲ್ಲಿದೆ ಘೋಸ್ಟ್. ಎಂ.ಜಿ.ಶ್ರೀನಿವಾಸ್ ಅನ್ನೋದು ಅವರ ಪೂರ್ತಿ ಹೆಸರು. ಈ ಚಿತ್ರಕ್ಕೀಗ ಅರ್ಚನಾ ಜೋಯಿಸ್ ಎಂಟ್ರಿ ಕೊಟ್ಟಿದ್ದಾರೆ.

ಅರ್ಚನಾ ಜೋಯಿಸ್, ಕೆಜಿಎಫ್ ಚಿತ್ರದಲ್ಲಿ ಯಶ್ ತಾಯಿಯ ಪಾತ್ರದಲ್ಲಿ ಬೆರಗು ಹುಟ್ಟಿಸಿದ್ದವರು. ವಾಸ್ತವವಾಗಿ ಯಶ್`ಗಿಂತ ವಯಸ್ಸಿನಲ್ಲಿ ಚಿಕ್ಕವರು. ಪಾತ್ರ ನೋಡಿದರೆ ಅಬ್ಬಾ.. ಎನ್ನಬೇಕು ಹಾಗೆ ನಟಿಸಿದ್ದ ಅರ್ಚನಾ ಜೋಯಿಸ್, ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸುತ್ತಿದ್ದಾರೆ. ಹಾಗಂತ ಅರ್ಚನಾ ಜೋಯಿಸ್ ಶಿವಣ್ಣಗೆ ಜೋಡಿ ಅಲ್ಲವಂತೆ. ಆದರೆ ಚಿತ್ರದುದ್ದಕ್ಕೂ ಅರ್ಚನಾ ಅವರ ಪಾತ್ರ ಇರಲಿದೆಯಂತೆ. ಘೋಸ್ಟ್ ಒಂದು ಆಕ್ಷನ್ ಥ್ರಿಲ್ಲರ್ ಆಗಿದ್ದು, ಚಿತ್ರಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಇದೆ.