ಸುಮಾರು ವರ್ಷಗಳ ಗ್ಯಾಪ್ ನಂತರ ಚಿತ್ರರಂಗಕ್ಕೆ ವಾಪಸ್ ಆಗಿರುವ ಕೋಮಲ್, ಒಂದೆಡೆ ತಮ್ಮದೇ ಬ್ಯಾನರ್`ನಲ್ಲಿ ಒಂದು ಸಿನಿಮಾ ಮಾಡುತ್ತಿದ್ದಾರೆ. ಮತ್ತೊಂದೆಡೆ ರೋಲೆಕ್ಸ್ ಅನ್ನೋ ಚಿತ್ರಕ್ಕೂ ಓಕೆ ಎಂದಿದ್ದಾರೆ. ಶ್ರೀನಿವಾಸ್ ಮಂಡ್ಯ ನಿರ್ದೇಶನದ ರೋಲೆಕ್ಸ್ ಚಿತ್ರಕ್ಕೆ ಹೀರೋಯಿನ್ ಆಗಿ ಬಂದಿರೋದು ಸೋನಲ್ ಮಂಥೆರೋ. ಕಥೆ ವಿಭಿನ್ನವಾಗಿದೆ. ಕೋಮಲ್ ಅವರ ಜೊತೆ ತುಂಬಾ ಎಂಜಾಯ್ ಮಾಡಿಕೊಂಡು ನಟಿಸುತ್ತಿದ್ದೇನೆ ಎಂದಿದ್ದಾರೆ ಸೋನಲ್ ಮಂಥೆರೋ.
ಸೋನಲ್ ಅವರನ್ನು ಚಿತ್ರರಂಗ ಪಂಚತಂತ್ರದ ಬೆಡಗಿ ಎಂದೇ ಗುರುತಿಸುತ್ತೆ. ಯೋಗರಾಜ್ ಭಟ್ಟರ ಚಿತ್ರ ಕೊಟ್ಟ ಕ್ರೆಡಿಟ್ ಅದು. ಇತ್ತೀಚೆಗೆ ಬನಾರಸ್ ಮೂಲಕ ಅಲೆ ಎಬ್ಬಿಸಿದ್ದ ಚೆಲುವೆ ಸೋನಲ್ ಮಂಥೆರೋ. ಇದೆಲ್ಲದರ ಜೊತೆಗೆ ಸೋನಲ್ ಮಂಥೆರೋ ಕೈತುಂಬಾ ಚಿತ್ರಗಳಿವೆ. ಒಂದಲ್ಲ..ಎರಡಲ್ಲ..ಹಲವಾರು..ಒಂದೊಂದೂ ವಿಭಿನ್ನ.
ರಾಬರ್ಟ್ ಚಿತ್ರದ ನಂತರ ಮತ್ತೊಮ್ಮೆ ವಿನೋದ್ ಪ್ರಭಾಕರ್ ಜೊತೆ ಮಾದೇವದಲ್ಲಿ ಜೊತೆಯಾಗಿದ್ದಾರೆ ಸೋನಲ್. ತನುಷ್ ಶಿವಣ್ಣ ನಟಿಸಿರೋ ಮಿ.ನಟ್ವರ್`ಲಾಲ್ ಚಿತ್ರವೂ ರೆಡಿಯಾಗಿದೆ. ಎರಡೂ ಚಿತ್ರಗಳು ರಿಲೀಸ್ ಆಗುವ ಹಂತಲ್ಲಿವೆ. ಸರೋಜಿನಿ ಎಂಬ ಚಿತ್ರದಲ್ಲಿ ಸರೋಜಿನಿ ನಾಯ್ಡು ಪಾತ್ರ ಮಾಡುತ್ತಿದ್ದಾರೆ. ಅರ್ಧ ಚಿತ್ರೀಕರಣ ಮುಗಿದಿದೆ. ಡಾರ್ಲಿಂಗ್ ಕೃಷ್ಣ ಜೊತೆಗಿನ ಶುಗರ್ ಫ್ಯಾಕ್ಟರಿ ಮುಂದಿನ ವಾರ ರಿಲೀಸ್ ಆಗುತ್ತಿದೆ. ಬಿ.ಸಿ.ಪಾಟೀಲರ ಗರಡಿಗೆ ಸೋನಲ್ ಅವರೇ ಹೀರೋಯಿನ್. ಉಪೇಂದ್ರರ ಬುದ್ದಿವಂತ 2 ಚಿತ್ರಕ್ಕೂ ಸೋನಲ್ ಅವರೇ ಹೀರೋಯಿನ್. ಟೋಟಲ್ಲಿ ಸೋನಲ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.