ಡಾಲಿ ಧನಂಜಯ್ ಸುಮ್ಮನೆ ಕೂರುವವರಲ್ಲ. ಒಂದೆಡೆ ಪ್ರೊಡಕ್ಷನ್..ಮತ್ತೊಂದೆಡೆ ನಟನೆ.. ಮತ್ತೊಂದು ಕಡೆ ಬರವಣಿಗೆ.. ಒಟ್ಟಿನಲ್ಲಿ ಕೈತುಂಬಾ ಕೆಲಸ ಇರಬೇಕು. ಶಿವಣ್ಣನ ಹಾದಿಯಲ್ಲಿ ಸಾಗುತ್ತಿದ್ದಾರಾ.. ಎನಿಸಬಹುದು. ಸದ್ಯಕ್ಕೆ ಬೇಡ. ಡಾಲಿ ಈಗ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಜೀಬ್ರಾ. ಇದು ತೆಲುಗು ಸಿನಿಮಾ. ಕನ್ನಡದಲ್ಲೂ ಬರಲಿದೆ.
ತೆಲುಗಿನಲ್ಲಿ ನಟಿಸುವ ಸತ್ಯದೇವ್ ಕೂಡಾ ಡಾಲಿ ಧನಂಜಯ ಅವರಂತೆಯೇ. ವಿಭಿನ್ನ ಪಾತ್ರಗಳ ಮೂಲಕವೇ ಗಮನ ಸೆಳೆದ ಕಲಾವಿದ. ಈಗಾಗಲೇ ಚಿತ್ರತಂಡ 50 ದಿನಗಳ ಶೂಟಿಂಗ್ ಮುಗಿಸಿದೆ. ಪುಷ್ಪ ಚಿತ್ರದಲ್ಲಿ ಜಾಲಿ ರೆಡ್ಡಿಯಾಗಿ ವಿಲನ್ ಆಗಿ ನಟಿಸಿದ್ದ ಡಾಲಿ, ಇಲ್ಲಿ ವಿಲನ್ ಅಲ್ಲವಂತೆ. ಇಬ್ಬರೂ ಹೀರೋಗಳೇ. ಪೆಂಗ್ವಿನ್ ಚಿತ್ರದ ಮೂಲಕ ಸಂಚಲನ ಸೃಷ್ಟಿಸಿದ್ದ ಈಶ್ವರ್ ಕಾರ್ತಿಕ್ ಜೀಬ್ರಾ ಚಿತ್ರಕ್ಕೆ ಡೈರೆಕ್ಟರ್. ಡಾಲಿ, ಸತ್ಯದೇವ್ ಜೊತೆ ಕಟ್ಟಪ್ಪ ಸತ್ಯರಾಜ್, ಕಾಮಿಡಿ ಹೀರೋ ಸುನಿಲ್ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ ನೀಡುತ್ತಿದ್ದು, ಬಾಲಸುಂದರಂ ಮತ್ತು ಪದ್ಮಜಾ ರೆಡ್ಡಿ ಈ ಚಿತ್ರದ ನಿರ್ಮಾಪಕರು.