ಇತ್ತೀಚೆಗೆ ಮದುವೆ, ನಿಶ್ಚಿತಾರ್ಥಗಳದ್ದೇ ಸುದ್ದಿ. ಆದಿತಿ ಪ್ರಭುದೇವ ಮದುವೆಯನ್ನೇ ಆದರೆ, ಹರಿಪ್ರಿಯಾ-ವಸಿಷ್ಠ ಸಿಂಹ, ಅಭಿಷೇಕ್ ಅಂಬರೀಷ್-ಅವಿವಾ ಬಿದ್ದಪ್ಪ ಎಂಗೇಜ್‍ಮೆಂಟ್ ಮಾಡಿಕೊಂಡರು. ಈಗ ವಿಕ್ರಾಂತ್ ರೋಣ ಚಿತ್ರದ ನಾಯಕಿಯಾಗಿದ್ದ ನೀತಾ ಅಶೋಕ್ ಕೂಡಾ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ. ಸತೀಶ್ ಮೆಸ್ತಾ ಎಂಬುವವರ ಜೊತೆ ನೀತಾ ನಿಶ್ಚಿತಾರ್ಥ ನೆರವೇರಿದೆ.
ಸತೀಶ್ ಮೆಸ್ತಾ ಅವರ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲದಿದ್ದರೂ ನೀತಾ ಮತ್ತು ಸತೀಶ್ ಇಬ್ಬರೂ ಕಾಲೇಜು ಸಹಪಾಠಿಗಳಂತೆ. ಎಂಬಿಎ ಮಾಡುವ ಕನಸಿಟ್ಟುಕೊಂಡಿದ್ದ ನೀತಾ ಅವರಿಗೆ ಆಕಸ್ಮಿಕವಾಗಿ ಯಶೋಧೆ ಎಂಬ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತ್ತು. ಉಡುಪಿ ಸಮೀಪದ ಕೋಟಾದ ನೀತಾ ಹಲವು ಹಿಂದಿ ಧಾರಾವಾಹಿಗಳಲ್ಲೂ ನಟಿಸಿದ್ದರು. ವಿಕ್ರಾಂತ್ ರೋಣ ಚಿತ್ರದಲ್ಲಿ ಅಪರ್ಣಾ ಬಲ್ಲಾಳ್/ಪನ್ನಾ ಪಾತ್ರದಲ್ಲಿ ನಟಿಸಿ ಗೆದ್ದಿದ್ದ ನೀತಾ, ಕಾಲೇಜು ಸಹಪಾಠಿಯೊಂದಿಗೇ ಮದುವೆಯಾಗಲು ನಿರ್ಧರಿಸಿದ್ದಾರೆ.