ಪ್ರಶಾಂತ್ ನೀಲ್-ಹೊಂಬಾಳೆ ಮತ್ತೊಮ್ಮೆ ಒಂದಾಗಿರುವ ಚಿತ್ರ ಬಘೀರ. ಡಾ.ಸೂರಿ ನಿರ್ದೇಶನದ ಚಿತ್ರಕ್ಕೆ ಶ್ರೀಮುರಳಿ ಹೀರೋ. ಚಿತ್ರಕ್ಕೆ ಕಥೆ ಬರೆದಿರುವುದು ಕೆಜಿಎಫ್ ಪ್ರಶಾಂತ್ ನೀಲ್. ಬಘೀರ ಚಿತ್ರದ ಲೇಟೆಸ್ಟ್ ಅಪ್‍ಡೇಟ್ ಬಂದಿದ್ದು, ಚಿತ್ರದ ನಾಯಕಿಯಾಗಿ ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ.
ರುಕ್ಮಿಣಿ ವಸಂತ್ ಅವರ ಒಂದು ಚಿತ್ರವೂ ಇನ್ನೂ ಬಿಡುಗಡೆಯಾಗಿಲ್ಲ. ಮೊದಲನೇ ಸಿನಿಮಾ ರಕ್ಷಿತ್ ಶೆಟ್ಟಿ ಜೊತೆಗಿನ ಸಪ್ತ ಸಾಗರದಾಚೆಯೆಲ್ಲೋ.. ನಿರ್ದೇಶಕ ಹೇಮಂತ್ ರಾವ್. 2ನೇ ಸಿನಿಮಾ ಬಾನದಾರಿಯಲ್ಲಿ. ಗಣೇಶ್ ಹೀರೋ ಆದರೆ ಡೈರೆಕ್ಟರ್ ಪ್ರೀತಂ ಗುಬ್ಬಿ. 3ನೇ ಸಿನಿಮಾ ಕೂಡಾ ಸ್ಟಾರ್ ನಟ ಶ್ರೀಮುರಳಿ. ಡೈರೆಕ್ಟರ್ ಡಾ.ಸೂರಿ. ಕಥೆ ಪ್ರಶಾಂತ್ ನೀಲ್. ಬ್ಯಾನರ್ ಹೊಂಬಾಳೆ.
ಬಘೀರ ನನಗೆ ತುಂಬಾ ವಿಶೇಷವಾದದ್ದು. ಪ್ರಶಾಂತ್ ನೀಲ್ ಕಥೆ ಮತ್ತು ಡಾ.ಸೂರಿಯವರ ನರೇಷನ್ ಎರಡೂ ಇಷ್ಟವಾಯಿತು. ಚಿತ್ರದ ನನ್ನ ಪಾತ್ರವನ್ನು ಸೂರಿ ಹೇಳುತ್ತಿದ್ದಂತೆಯೇ ನಾನು ಗಗನದಲ್ಲಿ ತೇಲುವುದಕ್ಕೆ ಶುರು ಮಾಡಿದೆ. ಪಾತ್ರವೇ ಹಾಗಿದೆ ಎಂದು ಥ್ರಿಲ್ ಆಗಿದ್ದಾರೆ ರುಕ್ಮಿಣಿ ವಸಂತ್.