ಹೆಚ್ಚೂ ಕಡಿಮೆ 2 ವರ್ಷ ಬ್ರೇಕ್ ತೆಗೆದುಕೊಂಡು ಇಂಡಸ್ಟ್ರಿಯಿಂದಲೇ ದೂರವಾಗಿದ್ದ ನಟ ಕೋಮಲ್ ಮತ್ತೊಮ್ಮೆ ಕಮ್ ಬ್ಯಾಕ್ ಮಾಡುತ್ತಿರುವುದು ಗೊತ್ತಿರುವ ವಿಷಯವಷ್ಟೇ. ಇತ್ತೀಚೆಗೆ ಕೋಮಲ್ ಅವರ ಪತ್ನಿ ಅನುಸೂಯ ಅವರೇ ನಿರ್ಮಾಣ ಮಾಡುತ್ತಿರುವ ಕಾಲಯ ನಮಃ ಸೆಟ್ಟೇರಿತ್ತು. ಮತಿವಣ್ಣನ್ ನಿರ್ದೇಶನದ ಚಿತ್ರಕ್ಕೆ ಶುಭ ಕೋರಿದ್ದ ಜಗ್ಗೇಶ್ ನನ್ನ ತಮ್ಮನ ಗುಡ್ ಟೈಂ ಇನ್ನು ಶುರುವಾಗುತ್ತೆ ಎಂದು ವಿಶ್ವಾಸದಿಂದ ಹೇಳಿಕೊಂಡಿದ್ದರು. ಕಾಲಾಯ ನಮಃ ಚಿತ್ರದಲ್ಲಿ ಆಸಿಯಾ ಫಿರ್ದೋಸ್ ಹೀರೋಯಿನ್. ಜಗ್ಗೇಶ್ ಪುತ್ರ ಯತಿರಾಜ್, ತಿಲಕ್, ಸುಚೇಂದ್ರ ಪ್ರಸಾದ್ ಮೊದಲಾದವರು ನಟಿಸುತ್ತಿದ್ದಾರೆ. ಇದರ ನಡುವೆಯೇ ಇನ್ನೊಂದು ಸಿನಿಮಾ ಸೆಟ್ಠೇರಿದೆ. ರೋಲೆಕ್ಸ್.
ರೊಲೆಕ್ಸ್ ಅನ್ನೋ ಸಿನಿಮಾ ಸೆಟ್ಟೇರುತ್ತಿದ್ದು ಒನ್ಸ್ ಎಗೇನ್ ಇದು ಕಂಟೆಂಟ್ ಬೇಸ್ ಸಿನಿಮಾ. ಅನಿಲ್ ಕುಮಾರ್ ಎಸ್. ಎಂಬುವರು ನಿರ್ಮಿಸುತ್ತಿರುವ ಚಿತ್ರಕ್ಕೆ ಶ್ರೀನಿವಾಸ್ ಮಂಡ್ಯ ಈ ಚಿತ್ರಕ್ಕೆ ಡೈರೆಕ್ಟರ್. ಬಿಲ್ ಗೇಟ್ಸ್ ಸಿನಿಮಾ ಮೂಲಕ ಗಮನ ಸೆಳೆದಿದ್ದ ಶ್ರೀನಿವಾಸ್ ಮಂಡ್ಯ ಈ ಚಿತ್ರದ ಮೇಲೂ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸ್ಸೋ.. ಕೋಮಲ್ ಪರ್ವ ಶುರುವಾಗಿದೆ.