ವಿಕ್ರಾಂತ್ ರೋಣ ನಂತರ ಜಾಕ್ ಮಂಜು ಮತ್ತೊಂದು ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಚಿತ್ರದ ಟೈಟಲ್ ಪಾದರಾಯ. ನೈಜ ಘಟನೆಗಳನ್ನಾಧರಿಸಿದ ಚಿತ್ರವಾಗಿದ್ದು, 2013-14ರಲ್ಲಿ ನಡೆದ ಕೆಲವು ಘಟನೆಗಳು ನೆನಪಾಗುತ್ತವೆ ಎಂದಿದೆ ಪಾದರಾಯ ಟೀಂ. ಅಂದಹಾಗೆ ಚಿತ್ರದ ವಿಶೇಷವೆಂದರೆ ಪತ್ರಕರ್ತರಾಗಿದ್ದವರು ನಿರ್ದೇಶಕರಾಗಿರುವುದು. ನಿರ್ದೇಶಕರಾಗಿದ್ದವರು ಹೀರೋ ಆಗಿರುವುದು.
ಜರ್ನಲಿಸ್ಟ್ಗಳು ಚಿತ್ರದಲ್ಲಿ ನಟಿಸುವುದು ಹೊಸದೇನಲ್ಲ ಈ ಹಿಂದೆಯೂ ಇಂತಹ ಪ್ರಯತ್ನಗಳಾಗಿವೆ. ಜಯಪ್ರಕಾಶ್ ಶೆಟ್ಟಿ, ರಂಗನಾಥ ಭಾರದ್ವಾಜ್, ಗೌರೀಶ್ ಅಕ್ಕಿ, ಶೀತಲ್ ಶೆಟ್ಟಿ, ಕಿರಿಕ್ ಕೀರ್ತಿ.. ಇವರೆಲ್ಲ ಜರ್ನಲಿಸ್ಟ್ಗಳೇ..
ಇಲ್ಲಿ ಡೈರೆಕ್ಟರ್ ಪಟ್ಟಕ್ಕೇರಿರುವುದು ಚಕ್ರವರ್ತಿ ಚಂದ್ರಚೂಡ್. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೂ ಅವರದ್ದೇ. ಹೀರೋ ಆಗಿರುವುದು ಮೈನಾ, ಸಂಜು ವೆಡ್ಸ್ ಗೀತಾ ಚಿತ್ರಗಳ ಖ್ಯಾತಿಯ ನಿರ್ದೇಶಕ ನಾಗಶೇಖರ್. ಅಂಜನಾದ್ರಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು ಚಿತ್ರತಂಡ ಇನ್ನೂ ನಾಯಕಿಯ ಹುಡುಕಾಟದಲ್ಲಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ಸುದೀಪ್ ಪುಟ್ಟ ಪಾತ್ರವೊಂದರಲ್ಲಿ ಅತಿಥಿ ನಟನಾಗಿ ಕಾಣಿಸಿಕೊಳ್ಳುವ ಸುದ್ದಿಯಿದೆ.