ಅಭಿಷೇಕ್ ಅಂಬರೀಷ್ ಮದುವೆ ಫಿಕ್ಸ್ ಆಗಿದೆ. ಡಿಸೆಂಬರ್ 11ಕ್ಕೆ ಎಂಗೇಜ್ಮೆಂಟ್ ಎಂಬುದು ಎಲ್ಲೆಡೆ ಸುದ್ದಿಯಾಗಿತ್ತು. ಅದೇ ವೇಳೆಗೆ ಅಂಬರೀಷ್ ಪುಣ್ಯತಿಥಿಯೂ ಬಂದು, ಪತ್ರಕರ್ತರ ಎದುರು ಸಿಕ್ಕ ಸುಮಲತಾ ಅಂಬರೀಷ್ ಮದುವೆ, ನಿಶ್ಚಿತಾರ್ಥ ಸುದ್ದಿಯನ್ನು ನಿರಾಕರಿಸಿದ್ದರು. ಮದುವೆ ಮಾಡುವಾಗ ನಿಮಗೆ ಹೇಳಿಯೇ ಮಾಡುತ್ತೇನೆ ಎಂದಿದ್ದರು. ಪ್ರತಿ ವರ್ಷ ಅಭಿ ಮದುವೆ, ನಿಶ್ಚಿತಾರ್ಥ, ಅಫೇರ್ ಸುದ್ದಿ ಬರ್ತಾನೆ ಇರುತ್ತೆ. ಮದುವೆ ವಿಷಯ ಅವನಿಗೇ ಬಿಟ್ಟಿದ್ದು ಎಂದಿದ್ದರು ಸುಮಲತಾ. ಸರಳವಾಗಿ ಹೇಳಬೇಕು ಎಂದರೆ ಇಲ್ಲವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿರಲೂ ಇಲ್ಲ. ನಡೆಯುತ್ತೆ ಎಂದು ಹೇಳಿರಲೂ ಇಲ್ಲ. ಹೀಗಾಗಿ ಸುದ್ದಿ ತಣ್ಣಗಾಗಿರಲಿಲ್ಲ.
ಈಗ ಅಭಿಷೇಕ್ ಮನಸು ಕದ್ದ ಹುಡುಗಿ ಫ್ಯಾಷನ್ ಗುರು ಎಂದೇ ಖ್ಯಾತರಾಗಿರುವ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಎನ್ನಲಾಗಿದೆ. ಅವಿವಾ ಕೂಡಾ ಫ್ಯಾಷನ್ ಡಿಸೈನರ್ ಮತ್ತು ಮಾಡೆಲ್. ಸದ್ಯಕ್ಕೆ ಬಂದಿರೋ ಮಾಹಿತಿ ಇಷ್ಟು. ಇತ್ತೀಚೆಗೆ ಸ್ವತಃ ಅಭಿಷೇಕ್ ಮೀಡಿಯಾಗಳಿಗೆ ಮಾತನಾಡುತ್ತ ನೀವು ಹೀಗೇ ಪದೇ ಪದೇ ನಂಗೆ ಎಂಗೇಜ್ಮೆಂಟ್ ಮಾಡಿಸ್ತಿದ್ರೆ ನಾಳೆ ನಂಗ್ಯಾರೂ ಹೆಣ್ಣು ಕೊಡಲ್ಲ ಎಂದಿದ್ದರು. ಈಗ ನೋಡಿದರೆ ಹುಡುಗಿಯ ಹೆಸರು ಹೊರಬಿದ್ದಿದೆ. ಆದರೆ.. ಈಗಲೂ.. ಈ ಕ್ಷಣಕ್ಕೂ ಇದು ಅಧಿಕೃತ ಅಲ್ಲ.