ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮಧ್ಯೆ ಪ್ರೀತಿಯಾಗಿದೆ. ಇಬ್ಬರೂ ಮದುವೆಯಾಗುತ್ತಿದ್ದಾರೆ ಎನ್ನುವುದು ಕನ್ನಡ ಚಿತ್ರರಂಗದಲ್ಲೇ ಸಂಚಲನ ಸೃಷ್ಟಿಸಿರುವ ಸುದ್ದಿ. ಇತ್ತೀಚೆಗೆ ಚಿತ್ರರಂಗದಲ್ಲಿ ಮದುವೆ ಓಲಗದ ಸದ್ದು ಜೋರಾಗಿಯೇ ಕೇಳುತ್ತಿದೆ. ಇತ್ತೀಚೆಗಷ್ಟೇ ಆದಿತಿ ಪ್ರಭುದೇವ ಮತ್ತು ಯಶಸ್ ಮದುವೆಯಾಯ್ತು. ಅಭಿಷೇಕ್ ಅಂಬರೀಷ್ ನಿಶ್ಚಿತಾರ್ಥದ ಸುದ್ದಿಯೂ ಜೋರಾಗಿದೆ. ಕನ್ನಡದಲ್ಲಿಯೂ ನಟಿಸಿದ್ದ ಹನ್ಸಿಕಾ ಮೊಟ್ವಾನಿ ಕೂಡಾ ಮದುವೆಯಾಗುತ್ತಿದ್ದಾರೆ. ಪ್ರಭಾಸ್, ಕೃತಿ ಸನೂನ್ ಅವರಿಗೆ ಪ್ರಪೋಸ್ ಮಾಡಿದ್ದಾರೆ ಎಂಬ ಸುದ್ದಿ ಆದಿಪುರುಷ್ ಟೀಮಿನಿಂದ ಹೊರಬಿದ್ದಿದೆ. ಇದರ ನಡುವೆಯೇ ನಮ್ಮ ಚಿತ್ರಂಗದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯ ಸಂಭ್ರಮವೇ ಬೇರೆ. ಈಗ ಸಂಭ್ರಮದ ಸುದ್ದಿ ಸತ್ಯವೇ ಇರಬಹುದು ಎಂಬುದಕ್ಕೆ ಸಾಕ್ಷ್ಯಗಳೂ ಸಿಗುತ್ತಿವೆ.
ಮೊದಲನೇ ಸಾಕ್ಷಿಯೇನು ಎಂದರೆ ಈ ಸುದ್ದಿ ಹೊರಬಿದ್ದ ದಿನದಿಂದ ಎಲ್ಲ ಟಿವಿ ಚಾನೆಲ್ಲುಗಳು, ವೆಬ್ಸೈಟುಗಳು ಈ ಸುದ್ದಿಯನ್ನು ದೊಡ್ಡದಾಗಿಯೇ ವರದಿ ಮಾಡಿವೆ. ಈ ಹಿಂದೆ ಇಂತಹ ವರದಿಗಳು ಬಂದಾಗಲೆಲ್ಲ ಸ್ಪಷ್ಟನೆ ಕೊಡುತ್ತಿದ್ದವರು ಈ ಬಾರಿ ನೋ ರಿಯಾಕ್ಷನ್. ಮೌನಕ್ಕೆ ಶರಣಾಗಿದ್ದಾರೆ. ಮೌನಂ ಸಮ್ಮತಿ ಲಕ್ಷಣಂ ಎಂದುಕೊಳ್ಳುತ್ತಿರೋದು ಮಾಧ್ಯಮದವರು. ಇದರ ಜೊತೆಗೆ ಇವರಿಬ್ಬರೂ ತೆಲುಗಿನ ಎವರು ರೀಮೇಕ್ನಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದ ಸೆಟ್ನಲ್ಲಿಯೇ ಲವ್ ಆಯ್ತು ಎನ್ನುವುದು ವರದಿ. ಆದರೆ ಈಗ ಅವರಿಬ್ಬರೂ ಒಟ್ಟಿಗೇ ದುಬೈನಲ್ಲಿ ಒಟ್ಟೊಟ್ಟಿಗೇ ಓಡಾಡಿ ಶಾಪಿಂಗ್ ಮಾಡಿರುವ ಫೋಟೋಗಳು ಹೊರಬಿದ್ದಿವೆ.
ಸತ್ಯವೇನು.. ಇಬ್ಬರೂ ತುಟಿ ಬಿಚ್ಚುವವರೆಗೆ.. ಸುದ್ದಿ, ಕೇವಲ ಗಾಳಿಸುದ್ದಿ. ಒಪ್ಪಿಕೊಳ್ಳದೇ ಇರ್ತಾರಾ..