` ಉಪೇಂದ್ರ ಯು&ಐ ನಲ್ಲಿ ಸನ್ನಿ ಲಿಯೋನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಉಪೇಂದ್ರ ಯು&ಐ ನಲ್ಲಿ ಸನ್ನಿ ಲಿಯೋನ್
Sunny Leone, Upendra's U n I

ಸನ್ನಿ ಲಿಯೋನ್ ಹೆಸರಿಗೆ ಒಂದು ವಿಶೇಷ ವಿಶಿಷ್ಟ ಕ್ರೇಜ್ ಇದೆ. ಸನ್ನಿಯ ಹೆಸರಿನ ಮಾಯೆ ಇವತ್ತಿಗೂ ಚಾಲ್ತಿಯಲ್ಲಿದೆ. ಈ ಸನ್ನಿ ಲಿಯೋನ್ ಕನ್ನಡಕ್ಕೆ ಹೊಸಬರೇನೂ ಅಲ್ಲ. ಈ ಹಿಂದೆ ಸೇಸಮ್ಮ.. ಸೇಸಮ್ಮ ಹಾಡಿಗೆ ಸೊಂಟ ಬಳುಕಿಸಿದ್ದ ಸನ್ನಿ, ಕಾಮಾಕ್ಷಿ ಕಾಮಾಕ್ಷಿ ಹಾಡಿನಲ್ಲೂ ಹುಬ್ಬೇರುವಂತೆ ಮಾಡಿದ್ದರು. ಈಗ ಮತ್ತೊಮ್ಮೆ ಬೆಂಗಳೂರಿಗೆ ಬಂದು ಉಪ್ಪಿಯ ಯು&ಐನಲ್ಲಿ ಹಾಡಿ ಕುಣಿದು ನಟಿಸಿ ಹೋಗಿದ್ದಾರಂತೆ.

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಯು&ಐನಲ್ಲಿ ಸನ್ನಿ ಲಿಯೋನ್ ಡ್ಯಾನ್ಸ್ ಅಷ್ಟೇ ಅಲ್ಲ, ನಟಿಸಿಯೂ ಇದ್ದಾರಂತೆ. ಸನ್ನಿಗೊಂದು ಮೇನ್ ರೋಲ್ ಕೊಟ್ಟಿದ್ದಾರಂತೆ ಉಪ್ಪಿ. ಸನ್ನಿ ಲಿಯೋನ್ ಬಂದು ಹೋಗುವವರೆಗೆ ಸಣ್ಣ ಸುಳಿವೂ ಬಿಟ್ಟುಕೊಡದೆ ಚಿತ್ರೀಕರಣ ಮುಗಿದ ಮೇಲೆ ಮಾಹಿತಿ ಹೊರಹಾಕಿದೆ ಯು&ಐ ಟೀಂ.

ಸದ್ಯಕ್ಕೆ ಉಪೇಂದ್ರ ಯು&ಐ ಚಿತ್ರದ ಸ್ಟಂಟ್ಸ್ ಚಿತ್ರೀಕರಣ ಮಾಡುತ್ತಿದ್ದು, ಮೋಹನ್ ಬಿ.ಕೆರೆಯಲ್ಲಿ ಹಾಕಿರುವ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ.

ಹಲವು ವರ್ಷಗಳ ನಂತರ ಉಪೇಂದ್ರ ಮತ್ತೆ ನಿರ್ದೇಶನ ಮಾಡುತ್ತಿದ್ದು, ಅಪರೂಪದ ಕಥೆಯೊಂದನ್ನು ಈ ಚಿತ್ರಕ್ಕಾಗಿ ಹೆಣೆದಿದ್ದಾರಂತೆ. ನೂರಕ್ಕೂ ಹೆಚ್ಚು ಕಲಾವಿದರು ಈ ಸಿನಿಮಾದಲ್ಲಿ ಇರುವುದು ಮತ್ತೊಂದು ವಿಶೇಷ. ಉಪೇಂದ್ರ ಪಾತ್ರ ಕೂಡ ಹೊಸ ರೀತಿಯಲ್ಲಿ ಇದ್ದು, ಹೆಸರಾಂತ ಅನೇಕ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್, ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಕೂಡ ಮೂಡಿದೆ