ಯೋಗರಾಜ್ ಭಟ್ ಮೂವೀಸ್ ಮತ್ತು ರವಿ ಶಾಮನೂರು ಫಿಲಮ್ಸ್ ಜಂಟಿ ನಿರ್ಮಾಣದ ಸಿನಿಮಾ ಪದವಿ ಪೂರ್ವ. ಪೃಥ್ವಿ ಶಾಮನೂರು ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಅಂಜಲಿ ಅನೀಸ್ ಮತ್ತು ಯಶ ಶಿವಕುಮಾರ್ ನಟಿಸಿರೋ ಚಿತ್ರಕ್ಕೆ ಹರಿಪ್ರಸಾದ್ ಜಯಣ್ಣ ನಿರ್ದೇಶಕರು. ಭಟ್ಟರ ಗುಂಪಿನ ಹರಿಪ್ರಸಾದ್ ಜಯಣ್ಣ ಅವರಿಗೆ ಇದು ಚೊಚ್ಚಲ ಸಿನಿಮಾ.
ಯೂಥ್ ಫುಲ್ ಲವ್ ಸ್ಟೋರಿಯಿರೋ ಚಿತ್ರದಲ್ಲಿ ಯೋಗರಾಜ್ ಭಟ್, ಆದಿತಿ ಪ್ರಭುದೇವ ಕೂಡಾ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯವಿದ್ದು, ಅರ್ಜುನ್ ಜನ್ಯಾ ಸಂಗೀತವಿದೆ.