ಯಾವನೋ ಇವ್ನು ಗಿಲಕ್ಕೂ..
ಎಲ್ಲಿಂದ ಬಂದ ಗಿಲಕ್ಕೂ..
ಏಳೇಳು ಬೆಟ್ಟ ದಾಟ್ಕೊಂಡು ಬಂದ
ಗಿಲಕ್ಕೂ ಶಿವ ಗಿಲಕ್ಕೂ..
ಹಾಡು ಕುಣಿಯುವಂತಿದೆ. ಅರ್ಜುನ್ ಜನ್ಯ ಮ್ಯೂಸಿಕ್ಕು, ನಾಗೇಂದ್ರ ಪ್ರಸಾದ್ ಲಿರಿಕ್ಸು, ಮಂಗ್ಲಿ ವಾಯ್ಸ್ ಮ್ಯಾಜಿಕ್ಕುಕ.. ಎಲ್ಲವೂ ಒಟ್ಟೊಟ್ಟಿಗೇ ಮ್ಯಾಚ್ ಆಗಿ ಕುಣಿಯುವಂತೆ ಮಾಡಿದೆ. ಶಿವಣ್ಣ ಅವರ 125ನೇ ಸಿನಿಮಾ ವೇದ ಚಿತ್ರದ ಮೊದಲ ಹಾಡಿದು. ಇತ್ತೀಚೆಗಷ್ಟೇ ರಿಲೀಸ್ ಡೇಟ್ ಅನೌನ್ಸ್ ಮಾಡಿ ಚಿತ್ರದ ವೆಪನ್ಸ್ ಟೀಸರ್ ಬಿಟ್ಟಿದ್ದ ವೇದ, ಈಗ ಮೊದಲ ಹಾಡಿನಲ್ಲೇ ಮೋಡಿ ಮಾಡಿದೆ. ವಿಲನ್ಗಳನ್ನು ಶಿವಣ್ಣ ಚೆಂಡಾಡುವ ಹಾಡಿನ ಬ್ಯಾಕ್ಗ್ರೌಂಡ್ನಲ್ಲಿ ಬರುತ್ತದೆ. ಶಿವಣ್ಣನ ಒಂದೊಂದು ಹೊಡೆತಕ್ಕೂ ವಿಲನ್ಗಳು ಹಾರಿ ಬೀಳುತ್ತಿದ್ದರೆ, ಬ್ಯಾಕ್ಗ್ರೌಂಡ್ನಲ್ಲಿ.. ಗಿಲಕ್ಕೂ ಶಿವ ಗಿಲಕ್ಕೂ..
ಗೀತಾ ಶಿವರಾಜ್ಕುಮಾರ್ ನಿರ್ಮಾಪಕಿಯಾಗಿರುವ ಮೊದಲ ಸಿನಿಮಾ ವೇದ. ಶಿವಣ್ಣ ಎದುರು ಗಾನವಿ ಲಕ್ಷ್ಮಣ್, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ರಘು ಶಿವಮೊಗ್ಗ, ಜಗ್ಗಪ್ಪ, ಚೆಲುವರಾಜ್, ವಿನಯ್ ಬಿದ್ದಪ್ಪ, ಭರತ್ ಸಾಗರ್, ಪ್ರಸನ್ನ, ಸಂಜೀವ್, ಕುರಿ ಪ್ರತಾಪ್, ಲಾಸ್ಯ ನಾಗರಾಜ್.. ಹೀಗೆ ಕಲಾವಿದರ ದಂಡೇ ಇದೆ.