` ಆದಿತಿ ಪ್ರಭುದೇವ ಬಾಳಿನಲ್ಲಿ ಯಶಸ್ವಿ ಆಗಮನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಆದಿತಿ ಪ್ರಭುದೇವ ಬಾಳಿನಲ್ಲಿ ಯಶಸ್ವಿ ಆಗಮನ
Aditi Prabhudeva, Yashas Wedding Reception Image

ನಟಿ ಆದಿತಿ ಪ್ರಭುದೇವ ಮತ್ತು ಯಶಸ್ವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದಿತಿ ಪ್ರಭುದೇವ ಇಂದಿನಿಂದ ಶ್ರೀಮತಿ ಆದಿತಿ ಯಶಸ್ವಿಯಾಗಲಿದ್ದಾರೆ. ಉದ್ಯಮಿಯೂ ಆಗಿರುವ ಯಶಸ್ವಿ, ಕಾಫಿ ಪ್ಲಾಂಟರ್ ಕೂಡಾ ಹೌದು. ಚಂದನ್ ಶೆಟ್ಟಿ ಜೊತೆ ಆದಿತಿ ಹಾಡಿ ಕುಣಿದಿದ್ದ ಪರ್ಫೆಕ್ಟ್ ಗರ್ಲ್ ಆಲ್ಬಂ ಸಾಂಗ್ ನೋಡಿದ ಮೇಲೆ ಆದಿತಿ ಸಖತ್ ಇಷ್ಟವಾದರಂತೆ. ಯಶಸ್ವಿ ಮನೆಯಲ್ಲಿ ಹೇಳಿ, ಮನೆಯವರು ಆದಿತಿ ಮನೆಯಲ್ಲಿ ಕೇಳಿ, ಅದು ಆದಿತಿಗೂ ಇಷ್ಟವಾಗಿ ಇಬ್ಬರೂ ಮದುವೆಯಾಗುತ್ತಿದ್ದಾರೆ. ಬೇರೆ ಹೀರೋಯಿನ್‍ಗಳ ರೀತಿ ಅಲ್ಲದ ಆದಿತಿ ಓಪನ್ ಆಗಿಯೇ ನಮ್ ಹುಡ್ಗ ಎಂದು ಹೇಳಿಕೊಂಡಿದ್ದರು. ಯಶಸ್ವಿಯ ಬಗ್ಗೆ ಖುಷಿಯಿಂದ ಮಾತನಾಡಿದ್ದರು.

ನಿನ್ನೆ ನಡೆದ ಆದಿತಿ-ಯಶಸ್ವಿ ಆರತಕ್ಷತೆಗೆ ಯಶ್-ರಾಧಿಕಾ ಪಂಡಿತ್, ಲಹರಿ ವೇಲು , ಕಟ್ಟಾ ಸುಬ್ರಹ್ಮಣ್ಯ ನಾಯ್ಡು , ಹಿರಿಯ ನಟಿ ತ್ರಿವೇಣಿ , ನಿರ್ಮಾಪಕ ಉದಯ್ ಕೆ ಮೆಹ್ತಾ, ನಟ ನವೀನ್ ಕೃಷ್ಣ, ಮೇಘಾ ಶೆಟ್ಟಿ, ರಂಜನಿ ರಾಘವನ್,

 ಸಚಿವ ಸೋಮಣ್ಣ ಸೇರಿ ಸಿನಿಮಾ ಹಾಗೂ ರಾಜಕೀಯ ಗಣ್ಯರು ಭಾಗಿಯಾಗಿ  ನವದಂಪತಿಗೆ ಶುಭ ಕೋರಿದರು.