ಚಿತ್ರದ ಟ್ರೇಲರ್ ನೋಡಿದವರಿಗೆ ಅನಿಸಿದ್ದೇ ಒಂದು. ಚಿತ್ರದಲ್ಲಿ ಇರೋದೇ ಇನ್ನೊಂದು. ಏಕೆಂದರೆ ಸಿನಿಮಾದಲ್ಲಿ ರಾಮ್`ನನ್ನು ಲವ್ ಮಾಡೋದು ರಮ್ಯಾ..ರಕ್ಷಿತಾ ಮತ್ತು ರಾಧಿಕಾ. ಜೊತೆ ರಶ್ಮಿಕಾ ಅನ್ನೋ ಇನ್ನೊಂದು ಪಾತ್ರವೂ ಇದೆ. ತ್ರಿಬ್ಬಲ್ ರೈಡಿಂಗ್ನಲ್ಲಿ ಗಣೇಶ್ ಸಕಲಕಲಾವಲ್ಲಭನೇ ಆದರೂ, ಆತನಿಗೆ ಆಟವಾಡಿಸೋದು ಆದಿತಿ ಪ್ರಭುದೇವ. ಮೇಘಾ ಶೆಟ್ಟಿ ಮತ್ತು ರಚನಾ ಇಂದರ್. ಗಣೇಶ್ ಜೊತೆ ಹುಡುಗಿಯರು ಆಡುವ ಲವ್ ಗೇಮ್ನಲ್ಲಿ ಲಾಜಿಕ್ ಇಲ್ಲ. ಭರಪೂರ ಮ್ಯಾಜಿಕ್ ಇದೆ. ಸೀರಿಯಸ್ ಸಾಕಪ್ಪಾ ಸಾಕು, ಒಂದಷ್ಟು ಹೊತ್ತು ನಗೋಣ ಎಂದುಕೊಂಡು ಸಿನಿಮಾಗೆ ಹೋದವರಿಗೆ ಬಂಪರ್ ಬಹುಮಾನ.
ಗಣೇಶ್ ಜೊತೆ ನಟಿಸಿರೋ ಚೆಲುವೆಯರು ಗಣೇಶ್ಗೆ ಚಮಕ್ ಕೊಡೋದು ಕಿಕ್ ಕೊಡುತ್ತಾ ಹೋಗುತ್ತದೆ. ಗರುಡನ ಪಾತ್ರದಲ್ಲಿರೋ ಸಾಧು ಕೋಕಿಲ ಕಡೆಯವರೆಗೂ ನಗಿಸುತ್ತಾರೆ. ರವಿಶಂಕರ್ ಎಂಟ್ರಿ ಆದ ಮೇಲೆ ಧಾಂಧೂಂಮಜಾಕ. ಮಹೇಶ್ ಗೌಡ ನಕ್ಕು ನಗಿಸುತ್ತಲೇ ಬೊಂಬಾಟ್ ತ್ರಿಬಲ್ ರೈಡಿಂಗ್ ಮಾಡಿದ್ದಾರೆ. ಪ್ರೇಕ್ಷಕರಿಗೂ ಇಷ್ಟವಾಗಿದೆ.