ಗಣೇಶ್ ಚಿತ್ರಗಳೆಂದರೆ ಕಾಮಿಡಿ ಇರಬೇಕು. ಒಂದು ಮುದ್ದಾದ ಲವ್ ಸ್ಟೋರಿ ಟ್ರ್ಯಾಕ್ ಇರಬೇಕು. ಅವರೆಡರ ಮಧ್ಯೆ ಚೆಂದವಾದ ಹಾಡುಗಳೂ ಇರಬೇಕು. ಹೀರೋಯಿನ್ ಸುಂದರವಾಗಿರಬೇಕು.. ಇದೆಲ್ಲವೂ ಪ್ರೇಕ್ಷಕರ ನಿರೀಕ್ಷೆಯೂ ಹೌದು. ಅದಕ್ಕೆ ಡಬ್ಕುಡಬಲ್ ಆಗಿ ತ್ರಿಬಲ್ ರೈಡಿಂಗ್ ಬರುತ್ತಿದ್ದಾರೆ ಮಹೇಶ್ ಗೌಡ. ಹಾಡು ಚೆಂದಾಗಿವೆ. ಕಾಮಿಡಿ ಮಸ್ತಾಗಿದೆ. ಸುಂದರ ಹೀರೋಯಿನ್.. ಒಬ್ಬರ್ಯಾಕೆ.. ಮೂರ್ ಜನ ಇದ್ದಾರೆ ಎಂದು ಹೇಳಿ ಮೂರು ಸುಂದರಿಯರ ಜೊತೆ ಲವ್ ಟ್ರ್ಯಾಕ್ ಸಿದ್ಧ ಮಾಡಿದ್ದಾರೆ ಮಹೇಶ್ ಗೌಡ.
ಗಣೇಶ್ ಎದುರು ಆದಿತಿ ಪ್ರಭುದೇವ, ರಚನಾ ಇಂದರ್ ಹಾಗೂ ಮೇಘಾ ಶೆಟ್ಟಿ ಹೀರೋಯಿನ್ಸ್.
ಪ್ರೀತಿ ಮತ್ತು ಕುಟುಂಬದ ಕಥೆಯೊಂದಿಗೆ ಬಂದಿರುವ ನಿರ್ದೇಶಕರು, ಈ ಪಾತ್ರಕ್ಕೆ ಗಣೇಶ್ನ ಬಹುಮುಖತೆಯು ಸಂಪೂರ್ಣವಾಗಿ ಸರಿಹೊಂದುತ್ತದೆ ಎಂದು ಭಾವಿಸಿದ್ದು ಅವರನ್ನೇ ಟ್ರಿಬಲ್ ರೈಡಿಂಗ್ಗೆ ಆಯ್ಕೆ ಮಾಡಿದ್ದಾಗಿ ಹೇಳಿದ್ದಾರೆ. ತಮ್ಮ ಪಾತ್ರಗಳಿಗೆ ಜೀವ ತುಂಬುವ ಕೆಲವೇ ಕೆಲವು ನಟರಲ್ಲಿ ಗಣೇಶ್ ಸಹ ಒಬ್ಬರು. ಅವರು ಟ್ರಿಬಲ್ ರೈಡಿಂಗ್ನಲ್ಲಿ ವೈದ್ಯರ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಮಹೇಶ್ ಹೇಳುತ್ತಾರೆ. ಯೋಗರಾಜ್ ಭಟ್, ದುನಿಯಾ ಸೂರಿಯವರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಮಹೇಶ್ ಗೌಡ, ಈ ಹಿಂದೆ ವಿನೋದ್ ಪ್ರಭಾಕರ್ ಅವರಿಗೆ ರಗಡ್ ಚಿತ್ರವನ್ನು ನಿರ್ದೇಶಿಸಿದ್ದರು. ಆಗ ಆಕ್ಷನ್ ನೀಡಿದ್ದ ಡೈರೆಕ್ಟರ್, ಈಗ ಲವ್ ಬ್ರೇಕಪ್ ಕಾಮಿಡಿ ಸಿನಿಮಾ ಮಾಡಿದ್ದಾರೆ. ಅಂದಹಾಗೆ ಚಿತ್ರದಲ್ಲಿ ಇನ್ನೂ ಒಬ್ಬ ಹೀರೋಯಿನ್ ಇದ್ದಾರಂತೆ. ಅವರ್ ಯಾರು ಅನ್ನೋದನ್ನ ಸಿನಿಮಾ ಥಿಯೇಟರಲ್ಲೇ ನೋಡಿ ಎಂದು ಸಸ್ಪೆನ್ಸ್ ಇಟ್ಟಿದ್ದಾರೆ ಮಹೇಶ್ ಗೌಡ.
ಸಾಧು ಕೋಕಿಲ, ರವಿಶಂಕರ್, ಶರತ್ ಲೋಹಿತಾಶ್ವ, ಶೋಭರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಸೇರಿದಂತೆ ಚಿತ್ರದ ತಾರಾಬಳಗವಿದೆ. ರಾಮ್ಗೋಪಾಲ್ ಅವರು ಬಂಡವಾಳ ಹೂಡಿರುವ ಟ್ರಿಬಲ್ ರೈಡಿಂಗ್ ನವೆಂಬರ್ 25ರಂದು ಬಿಡುಗಡೆಯಾಗಲಿದೆ. ಚಿತ್ರಕ್ಕೆ ಸಾಯಿ ಕಾರ್ತೀಕ್ ಸಂಗೀತ ಸಂಯೋಜಿಸಿದ್ದಾರೆ.