ಒಬ್ಬರಲ್ಲ..ಇಬ್ಬರಲ್ಲ..ಮೂವರು.. ಮೂವರೂ ಸುಂದರಿಯರೇ.. ಮೂವರೂ ಆತನಿಗೆ ಐ ಲವ್ ಯೂ ಹೇಳ್ತಾರೆ.. ರಮ್ಯಾ..ರಕ್ಷಿತಾ..ರಾಧಿಕಾ.. ಹೆಸರಿಗೆ ತಕ್ಕಂತೆಯೇ ಸೌಂದರ್ಯ ದೇವತೆಯರು. ಆ ಮೂರೂ ಜನ ಐ ಲವ್ ಯೂ ಎಂದರೂ ಆತ ಮಾತ್ರ ಏನೂ ಮಾಡೋಕಾಗಲ್ಲ..
ರಮ್ಯಾ, ರಕ್ಷಿತಾ, ರಾಧಿಕಾ..ಅಂತಾ ಹೀರೋಯಿನ್ಸ್‍ಗೆ ಹೆಸರು ಕೊಟ್ಟು ನನ್ನನ್ನು ಮಾತ್ರ ರಾಮನನ್ನಾಗಿ ಮಾಡಿಬಿಟ್ಟಿದ್ದಾರೆ ಎಂದಿದ್ದಾರೆ ಗಣೇಶ್. ಗಣೇಶ್ ರೊಮ್ಯಾಂಟಿಕ್ ಹೀರೋ. ಕಾಮಿಡಿ ಗಣೇಶ್ ಪಾಲಿನ ಬ್ರಹ್ಮಾಸ್ತ್ರ. ಈ ಎರಡನ್ನೂ ಢಾಳಾಗಿ ತುಂಬಿಕೊಂಡಿರೋ ತ್ರಿಬ್ಬಲ್ ರೈಡಿಂಗ್ ಈ ವಾರ ರಿಲೀಸ್ ಆಗುತ್ತಿದೆ. ಆದಿತಿ ಪ್ರಭುದೇವ, ರಚನಾ ಇಂದರ್, ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿರೋ ಚಿತ್ರವಿದು. ಮಹೇಶ್ ಗೌಡ ನಿರ್ದೇಶನದಲ್ಲಿ ತಯಾರಾಗಿದೆ.
ಮಹೇಶ್ ನನ್ನ ಬಳಿ ಎರಡು ಸ್ಟೋರಿ ತಂದರು. ಒಂದನ್ನು ನಾನು ಇಷ್ಟಪಟ್ಟೆ. ಅದನ್ನು ಡೆವಲಪ್ ಮಾಡಿ, ಚಿತ್ರಕಥೆಯೊಂದಿಗೆ ಬಂದರು. ಇನ್ನೂ ಇಷ್ಟವಾಯಿತು. ಸಿನಿಮಾ ನೋಡುವವರಿಗೆ ನಗುವಿನ ದಂಗೆಯೇಳುತ್ತದೆ. ಇದೊಂದು ರೀತಿ ಸಿನಿಮಾ ಶುರುವಾದಾಗಿನಿಂದ ಮುಗಿಯುವವರೆಗೆ ನಗುವೇ ನಗು. ಕೊನೆಯ 15 ನಿಮಿಷದಲ್ಲಂತೂ ನಗುವುದಕ್ಕೆ ಪುರುಸೊತ್ತು ಸಿಗುವುದಿಲ್ಲ. ಸಿನಿಮಾ ಬಂದರೆ ಹೋಗುವಾಗ ನಗು ನಗುತ್ತಾ ಹೋಗುತ್ತಾರೆ ಎನ್ನುವುದು ಗಣೇಶ್ ಕೊಡುವ ಕಾನ್ಫಿಡೆನ್ಸ್.