ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಆರ್.ಆರ್.ಆರ್. ಹವಾ ಇದೆ. ಇದು ತೆಲುಗಿನ ಆರ್.ಆರ್.ಆರ್. ಅಲ್ಲ. ಕನ್ನಡದ ಆರ್.ಆರ್.ಆರ್. ದಶಕದ ಹಿಂದೆ ಕನ್ನಡ ಚಿತ್ರರಂಗದಲ್ಲಿ ಆರ್.ಆರ್.ಆರ್. ಇಲ್ಲದೆ ಸಿನಿಮಾಗಳೇ ಇರಲಿಲ್ಲ. ಈಗ ಆ ಆರ್.ಆರ್.ಆರ್. ಜೊತೆ ಗೋಲ್ಡನ್ ಸ್ಟಾರ್ ಸೇರಿದ್ದಾರೆ. ಇದೇ ವಾರ ರಿಲೀಸ್ ಆಗುತ್ತಿರೋ ತ್ರಿಬ್ಬಲ್ ರೈಡಿಂಗ್‍ನಲ್ಲಿ ಗಣೇಶ್ ಎದುರು ಆರ್.ಆರ್.ಆರ್. ನಾಯಕಿಯರು. ಈಗಾಗಲೇ ಗೊತ್ತಿರುವಂತೆ ಚಿತ್ರದಲ್ಲಿ ಮೂವರು ಹೀರೋಯಿನ್ಸ್. ಆದಿತಿ ಪ್ರಭುದೇವ, ರಚನಾ ಇಂದರ್ ಹಾಗೂ ಮೇಘಾ ಶೆಟ್ಟಿ. ಈ ಮೂರೂ ಪಾತ್ರಧಾರಿಗಳ ಹೆಸರಿನಲ್ಲೇ ಆರ್.ಆರ್.ಆರ್. ರಹಸ್ಯವೂ ಇದೆ.
ರಮ್ಯಾ ಹೆಸರಲ್ಲಿ ಆದಿತಿ ಪ್ರಭುದೇವ, ರಕ್ಷಿತಾ ಹೆಸರಲ್ಲಿ ಮೇಘಾ ಶೆಟ್ಟಿ ಹಾಗೂ ರಾಧಿಕಾ ಹೆಸರಿನಲ್ಲಿ ರಚನಾ ಇಂದರ್ ನಟಿಸಿದ್ದಾರೆ. ಆದರೆ ಹೆಸರಷ್ಟೇ, ಜನಪ್ರಿಯ ಹೆಸರು ಇರಲಿ ಎಂದು ಇಟ್ಟಿದ್ದೇವೆ. ಅವರ ವ್ಯಕ್ತಿತ್ವಕ್ಕೂ ಇವರ ಪಾತ್ರದ ಹೆಸರಿಗೂ ಸಂಬಂಧವೇನಿಲ್ಲ ಎಂದು ಮೊದಲೇ ಹೇಳಿ ಬಿಡುತ್ತಾರೆ ನಿರ್ದೇಶಕ ಮಹೇಶ್ ಗೌಡ. ರಮ್ಯಾ ಮಾಡರ್ನ್ ಹುಡುಗಿ. ರಕ್ಷಿತಾ ಡಾಕ್ಟರ್ ಹಾಗೂ ರಾಧಿಕಾ ಚೈಲ್ಡಿಷ್ ಕ್ಯಾರೆಕ್ಟರ್ ಇರುವ ಪಾತ್ರ. ಕಥೆಗೆ ಮೂವರೂ ಪಿಲ್ಲರ್‍ಗಳಿದ್ದಂತೆ ಎನ್ನುತ್ತಾರೆ ಮಹೇಶ್.
ಚಿತ್ರದ ಟ್ರೇಲರ್ ಪ್ರಕಾರವೇ ಮೂವರೂ ಸುಂದರಿಯರು ಗಣೇಶ್ ಅವರಿಗೆ ಐ ಲವ್ ಯೂ ಹೇಳ್ತಾರೆ. ಆದರೆ ಗಣೇಶ್ ಯಾರನ್ನ ಲವ್ ಮಾಡ್ತಾರೆ.. ಅದನ್ನ ತಿಳಿಬೇಕು ಅಂದ್ರೆ ಈ ವಾರ ರಿಲೀಸ್ ಆಗುತ್ತಿರೊ ತ್ರಿಬ್ಬಲ್ ರೈಡಿಂಗ್ ಚಿತ್ರವನ್ನ ನೋಡಬೇಕು. ಅಂದಹಾಗೆ ಇದು ಔಟ್ & ಔಟ್ ಕಾಮಿಡಿ ಸಿನಿಮಾ. ಫನ್..ಫನ್..ಫನ್.. ಧನ್‍ಧನಾಧನ್..