ಗೋಲ್ಡನ್ ಸ್ಟಾರ್ ಗಣೇಶ್ ಮೂರು ಜನ ಬ್ಯೂಟಿಫುಲ್ ಹೀರೋಯಿನ್ಸ್ ಜೊತೆ ತ್ರಿಬಲ್ ರೈಡಿಂಗ್ ಮಾಡಿದ್ದಾರೆ. ನಗುವಿನಲ್ಲೇ ಸಂಭ್ರಮದ ಅಲೆ ಎಬ್ಬಿಸೋ ಆದಿತಿ ಪ್ರಭುದೇವ, ಮುಗ್ಧತೆಯ ಮತ್ತೊಂದು ಅವತಾರ ರಚನಾ ಇಂದರ್, ಅಮಾಯಕತೆಯನ್ನು ಕಣ್ಣುಗಳಲ್ಲಿ ತುಂಬಿಕೊಂಡಿರೊ ಮೇಘಾ ಶೆಟ್ಟಿ ಜೊತೆ ಗಣೇಶ್ ತ್ರಿಬ್ಬಲ್ ರೈಡಿಂಗ್ ಮಾಡಿರುವುದು ಸ್ಪೆಷಲ್ಲು. ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಸಿನಿಮಾ ಇದೇ ನವೆಂಬರ್ 25ಕ್ಕೆ ಬೆಳ್ಳಿತೆರೆಗೆ ಬರಲಿದೆ. ಸಿನಿಮಾದ ಪ್ರಚಾರವನ್ನ ವಿಭಿನ್ನವಾಗಿ ಮಾಡಿರೋ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಚೆಲುವಿನ ಚಿತ್ತಾರ ಸಿನಿಮಾದ ಸ್ಟೈಲ್ನಲ್ಲೇ ಅಭಿಮಾನಿಗಳ ಜೊತೆ ಸೇರಿ ಬೈಕ್ ರೈಡಿಂಗ್ ಮಾಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್, ಚೆಲುವೆಯರ ಚಿತ್ತಾರವಿದು. ಸ್ಟೈಲು, ಸ್ಮೈಲಿಗಷ್ಟೇ ಅಲ್ಲ, ಟ್ರೆಂಡ್ ಸೆಟ್ಟರ್ ಕೂಡ ಆಗಿರೋ ಗಣೇಶ್ ಈಗ ಬೈಕ್ ಕ್ರೇಜ್ ಸೃಷ್ಟಿಸಿದ್ದಾರೆ. ಮುಂಗಾರು ಮಳೆ ಸಿನಿಮಾ ಬಂದಾಗ ಗಣೇಶ್ ಹಾಕಿದ್ದ ಕಾಸ್ಟ್ಯೂಮ್ಗಳು ಟ್ರೆಂಡ್ ಆಗಿದ್ದರೆ, ಚೆಲುವಿನ ಚಿತ್ತಾರದಲ್ಲಿ ಗಣೇಶ್ ಬೈಕ್ ಓಡಿಸಿದ್ದ ಸ್ಟೈಲ್ ಟ್ರೆಂಡ್ ಆಗಿತ್ತು. ಈಗ ಅದೇ ಸ್ಟೈಲ್ನಲ್ಲಿ ತ್ರಿಬ್ಬಲ್ ರೈಡಿಂಗ್ ಮಾಡಿದ್ದಾರೆ ಗಣೇಶ್.
ಮಹೇಶ್ ಹೌಡ ನಿರ್ದೇಶನದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಯಟ್ಟ ಯಟ್ಟ ಅನ್ನೋ ಸಾಂಗ್ ಇದೆ. ಈ ಹಾಡಿನಲ್ಲಿ ಗಣಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿನ ಹುಕ್ ಸ್ಟೆಪ್ಸ್ ಯಾರು ಚನ್ನಾಗಿ ಡಾನ್ಸ್ ಮಾಡುತ್ತಾರೋ ಅವರಲ್ಲಿ 25 ಜನರನ್ನ ಆಯ್ಕೆ ಮಾಡಿಕೊಂಡು ಅವರ ಜೊತೆ ರೈಡಿಂಗ್ ಹೋಗುತ್ತೇನೆ ಅಂತ ಗಣೇಶ್ ಹೇಳಿದ್ರು. ಹೀಗಾಗಿ ಈ ಡೈಹಾರ್ಡ್ ಪ್ಯಾನ್ಸ್ ಜೊತೆ ಗಣಿ ಬೈಕ್ ರೈಡ್ ಮಾಡಿದ್ದಾರೆ ಎಲ್ಲ 25 ಜನರ ಜೊತೆಯಲ್ಲೂ ರೈಡಿಂಗ್ ಹೋಗಿದ್ದು ವಿಶೇಷ.
ತ್ರಿಬಲ್ ರೈಡಿಂಗ್ ಹೀರೋಯಿನ್ಸ್ ಕೂಡ ನಾವೇನು ಕಮ್ಮಿ ಅನ್ನೋ ತರಾ ಫ್ಯಾನ್ಸ್ ಜೊತೆ ಬೈಕ್ ಹತ್ತಿ ರೈಡ್ ಮಾಡಿದ್ದಾರೆ. ನಟಿ ಆದಿತಿ ಪ್ರಭುದೇವ, ರಚನಾ ಇಂದರ್, ಮೇಘಾ ಶೆಟ್ಟಿ ರೈಡ್ ಮಾಡಿ ಸಂಭ್ರಮಿಸಿದ್ದಾರೆ. ಅಂದಹಾಗೆ ನಾಯಕಿಯರೆಲ್ಲ ಹುಡುಗರ ಜೊತೆ ರೈಡಿಂಗ್ ಹೋದರೆ, ಗಣೇಶ್ ಹುಡುಗರು-ಹುಡುಗಿಯರು ಎಂಬ ಭೇದ ಭಾವ ಮಾಡಲಿಲ್ಲ.