ರತ್ನನ್ ಪ್ರಪಂಚ ಸಿನಿಮಾ ನೋಡಿ ಪ್ರಶಾಂತ್ ನೀಲ್ ಅವರು ಫೋನ್ ಮಾಡಿದ್ದರು. ನನ್ನ ನಟನೆಯ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಸಲಾರ್ ಸಿನಿಮಾದಲ್ಲಿ ಒಂದು ಪಾತ್ರವಿದೆ. ಮಾಡ್ತೀಯಾ ಎಂದು ಕೇಳಿದ್ದರು. ಅದಾದ ಎಷ್ಟೋ ದಿನಗಳ ನಂತರ ಫೋಟೊ ಶೂಟ್ ಮುಗಿಸಿದೆ. ನನ್ನ ಪಾತ್ರದ ಬಗ್ಗೆಏನೂ ಹೇಳೋಕಾಗಲ್ಲ. ತುಂಬಾ ಡಿಫರೆಂಟ್ ಆಗಿದೆ. ನನ್ನ ನಟನೆ ನಿರ್ದೇಶಕರಿಗೆ ಇಷ್ಟವಾಗಿದೆ. ನೀಲ್ ಅವರು ಖುಷಿಯಾಗಿದ್ದಾರೆ. ಚೆನ್ನಾಗಿ ನಟಿಸುತ್ತಿದ್ದೀರ ಎಂದಿದ್ದಾರೆ. ಅಷ್ಟು ದೊಡ್ಡ ನಿರ್ದೇಶಕರ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ. ಅಂತಹುದರಲ್ಲಿ ನನ್ನ ನಟನೆಯನ್ನು ಅವರು ಹೊಗಳುವುದೆಂದರೆ ನನಗಿಂತ ಅದೃಷ್ಟವಂತ ಇನ್ನೊಬ್ಬನಿಲ್ಲ.. ಎಂದು ಥ್ರಿಲ್ಲಾಗಿದ್ದಾರೆ ಉಡಾಳ್ ಬಾಬು ಪ್ರಮೋದ್.
ರತ್ನನ್ ಪ್ರಪಂಚ ಸಿನಿಮಾದಲ್ಲಿ ಉಡಾಳ್ ಬಾಬು ಪಾತ್ರದಲ್ಲಿ ನಟಿಸಿ, ಪಾತ್ರದ ಮೂಲಕವೇ ಫೇಮಸ್ ಆದ ಪ್ರಮೋದ್, ಈಗ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿದ್ದಾರೆ.ಅದೇ ಪಾತ್ರ ಪ್ರಮೋದ್ ಅವರಿಗೆ
ಸಲಾರ್ ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟಿದೆ. ಸಲಾರ್, ಹೊಂಬಾಳೆಯ ಸಿನಿಮಾ. ಪ್ರಶಾಂತ್ ನೀಲ್ ಸಿನಿಮಾ. ಶೃತಿ ಹಾಸನ್,ಪ್ರಥ್ವಿರಾಜ್ ಸುಕುಮಾರನ್, ಜಗಪತಿ ಬಾಬುರಂತ ಘಟಾನುಘಟಿಗಳು ನಟಿಸುತ್ತಿರೋ ಸಿನಿಮಾ. ಅಂತಹ ಸಲಾರ್ ಸಿನಿಮಾದಲ್ಲಿವಿಶೇಷ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ ಪ್ರಮೋದ್.
ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ಪ್ರಮೋದ್ ಗೀತಾ ಬ್ಯಾಂಗಲ್ ಸ್ಟೋರ್ಸ್ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು. ಪ್ರೀಮಿಯರ್ ಪದ್ಮಿನಿಯಲ್ಲಿ ಜಗ್ಗೇಶ್ ಎದುರು ಸೈ ಎನಿಸಿಕೊಂಡರು.ರತ್ನನ್ ಪ್ರಪಂಚ ಸ್ಟಾರ್ ಡಮ್ ಕೊಟ್ಟಿದೆ. ಬಾಂಡ್ ರವಿಯಲ್ಲಿ ಹೀರೋ ಆಗಿರುವ ಪ್ರಮೋದ್, ಈಗ ಸಲಾರ್ಗೆ ಎಂಟ್ರಿ ಕೊಟ್ಟಿದ್ದಾರೆ.